Bale dindu mosaru sasive recipe in kannada | ಬಾಳೆದಿಂಡು ಮೊಸರು ಸಾಸಿವೆ ಮಾಡುವ ವಿಧಾನ
ಬಾಳೆದಿಂಡು ಮೊಸರು ಸಾಸಿವೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 7 - 8 cm ಉದ್ದದ ಬಾಳೆದಿಂಡು
- 1/2 ಕಪ್ ಮೊಸರು
- 1 ಟೀಸ್ಪೂನ್ ಉಪ್ಪು ಅಥವಾ ನಿಮ್ಮ ರುಚಿಗೆ ತಕ್ಕಷ್ಟು
ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಹಸಿಮೆಣಸಿನಕಾಯಿ
- 1/2 ಕಪ್ ತೆಂಗಿನ ತುರಿ
- 1/2 ಟೀಸ್ಪೂನ್ ಸಾಸಿವೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1 ಒಣ ಮೆಣಸಿನಕಾಯಿ
- 4 -5 ಕರಿಬೇವು
- 1 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
ಬಾಳೆದಿಂಡು ಮೊಸರು ಸಾಸಿವೆ ಮಾಡುವ ವಿಧಾನ:
- ಬಾಳೆದಿಂಡಿನ ಹೊರಗಿನ ಸಿಪ್ಪೆಗಳನ್ನು ತೆಗೆಯಿರಿ.
- ಚಕ್ರಗಳಾಗಿ ಕತ್ತರಿಸಿ ನಾರನ್ನು ತೆಗೆಯಿರಿ.
- ನಂತರ ಸಣ್ಣದಾಗಿ ಕತ್ತರಿಸಿ.
- ನಿಂಬೆಹಣ್ಣಿನ ರಸ ಹಾಕಿದ ನೀರಿನಲ್ಲಿ ಹತ್ತು ನಿಮಿಷ ಹಾಕಿಡಿ.
- ಆಮೇಲೆ ನೀರು ಬಗ್ಗಿಸಿ ತೆಗೆಯಿರಿ.
- ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಬೇಯಲು ಇಡಿ. ಬೇಯಿಸದೆಯೂ ಮಾಡಬಹುದು.
- ಹತ್ತು ನಿಮಿಷ ಬೇಯಿಸಿ ಸ್ಟವ್ ಆಫ್ ಮಾಡಿ.
- ತೆಂಗಿನತುರಿ, ಹಸಿಮೆಣಸಿನಕಾಯಿ ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ರುಬ್ಬಿ.
- ಅದನ್ನು ಒಂದು ಪಾತ್ರೆಗೆ ಹಾಕಿ ಮೊಸರನ್ನು ಸೇರಿಸಿ.
- ಬೇಯಿಸಿದ ಬಾಳೆದಿಂಡನ್ನು ಬಿಸಿ ಕಡಿಮೆ ಆದಮೇಲೆ ನೀರು ಬಸಿದು ಸೇರಿಸಿ.
- ರುಚಿಗೆ ತಕ್ಕಂತೆ ಉಪ್ಪು ಹಾಕಿ ಕಲಸಿ.
- ಎಣ್ಣೆ, ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ.
- ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ