ಶುಕ್ರವಾರ, ಮಾರ್ಚ್ 31, 2023

Healthy unde recipe in Kannada | ಆರೋಗ್ಯಕರ ಶಕ್ತಿ ಉಂಡೆ ಮಾಡುವ ವಿಧಾನ

 

Healthy unde recipe in Kannada

Healthy unde recipe in Kannada | ಆರೋಗ್ಯಕರ ಶಕ್ತಿ ಉಂಡೆ ಮಾಡುವ ವಿಧಾನ

ಆರೋಗ್ಯಕರ ಶಕ್ತಿ ಉಂಡೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಎಳ್ಳು
  2. 1 ಕಪ್ ಅಗಸೆಬೀಜ
  3. 1/2 ಕಪ್ ಬಾದಾಮಿ
  4. 1 ಕಪ್ ಬೆಲ್ಲ
  5. 1/4 ಕಪ್ ನೀರು
  6. 1 ಟೇಬಲ್ ಚಮಚ ತುಪ್ಪ

ಆರೋಗ್ಯಕರ ಶಕ್ತಿ ಉಂಡೆ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಳ್ಳನ್ನು ಚಟಪಟ ಸಿಡಿಯಲು ಶುರುವಾಗುವವರೆಗೆ ಹುರಿಯಿರಿ. 
  2. ನಂತರ ಅಗಸೆಬೀಜವನ್ನು ಸ್ವಲ್ಪ ಬಿಸಿ ಆಗುವವರೆಗೆ ಹುರಿಯಿರಿ. 
  3. ಕೊನೆಯಲ್ಲಿ ಬಾದಾಮಿಯನ್ನು ಅಲ್ಲಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. 
  4. ಹುರಿದ ಮೂರು ಪದಾರ್ಥಗಳನ್ನು ತರಿತರಿಯಾಗಿ ಪುಡಿ ಮಾಡಿ. 
  5. ಆಮೇಲೆ ಬಾಣಲೆಯಲ್ಲಿ ಪುಡಿಮಾಡಿದ ಬೆಲ್ಲ ಮತ್ತು ನೀರು ತೆಗೆದುಕೊಂಡು ಕುದಿಸಿ. 
  6. ಒಂದೆಳೆ ಪಾಕ ಮಾಡಿ. 
  7. ಪುಡಿ ಮಾಡಿದ ಪದಾರ್ಥಗಳನ್ನು ಹಾಕಿ ಮಗುಚಿ.
  8. ತುಪ್ಪ ಸೇರಿಸಿ, ಮತ್ತೊಮ್ಮೆ ಮಗುಚಿ, ಸ್ಟವ್ ಆಫ್ ಮಾಡಿ.  
  9. ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಉಂಡೆ ಮಾಡಿ. 
  10. ದಿನಕ್ಕೊಂದು ಉಂಡೆಯಂತೆ ಸವಿದು ಆನಂದಿಸಿ.

ಭಾನುವಾರ, ಮಾರ್ಚ್ 12, 2023

Hurigadale masale vade recipe in Kannada | ಹುರಿಗಡಲೆ ಮಸಾಲೆ ವಡೆ ಮಾಡುವ ವಿಧಾನ

 

Hurigadale masale vade recipe in Kannada

Hurigadale masale vade (ambode) recipe in Kannada | ಹುರಿಗಡಲೆ ಮಸಾಲೆ ವಡೆ (ಆಂಬೊಡೆ) ಮಾಡುವ ವಿಧಾನ 

Hurigadale masale vade video

ಹುರಿಗಡಲೆ ಮಸಾಲೆವಡೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್)

  1. 1 ಕಪ್ ಹುರಿಗಡಲೆ
  2. 1 ಒಣಮೆಣಸಿನಕಾಯಿ 
  3. 1/2 ಟೀಸ್ಪೂನ್ ಕೊತ್ತಂಬರಿ ಬೀಜ
  4. 1 - 2 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ
  5. 1 ಚಮಚ ಸಣ್ಣಗೆ ಹೆಚ್ಚಿದ ಶುಂಠಿ
  6. 5 - 6 ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ 
  7. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  8. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  9. 2 ಟೇಬಲ್ ಚಮಚ ಸಬ್ಬಸಿಗೆ ಸೊಪ್ಪು
  10. ನಿಮ್ಮ ರುಚಿ ಪ್ರಕಾರ ಉಪ್ಪು

ಹುರಿಗಡಲೆ ಮಸಾಲೆ ವಡೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಹೆಚ್ಚಿದ ಹಸಿರುಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಶುಂಠಿ ತೆಗೆದುಕೊಳ್ಳಿ.
  2. ನಂತರ ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ. 
  3. ಆಮೇಲೆ ಕತ್ತರಿಸಿದ ಈರುಳ್ಳಿ ಸೇರಿಸಿ. 
  4. ಕತ್ತರಿಸಿದ ಸಬ್ಬಸ್ಸಿಗೆ ಸೊಪ್ಪನ್ನು ಸೇರಿಸಿ. 
  5. ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ ಕಲಸಿ. 
  6. ನಂತರ ಒಂದು ಮಿಕ್ಸಿಜಾರಿನಲ್ಲಿ ಹುರಿಗಡಲೆ, ಒಣಮೆಣಸಿನಕಾಯಿ ಮತ್ತು ಕೊತ್ತಂಬರಿ ಬೀಜ ತೆಗೆದುಕೊಂಡು ಪುಡಿಮಾಡಿ. ಪುಡಿ ಸ್ವಲ್ಪ ತರಿತರಿಯಾಗಿರಲಿ. 
  7. ಅದನ್ನು ಕಲಸಿಟ್ಟ ಬೇರೆ ಪದಾರ್ಥಗಳೊಂದಿಗೆ ಸೇರಿಸಿ ಕಲಸಿ. 
  8. ನಿಂಬೆಹಣ್ಣಿನ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಅಂಗೈನಿಂದ ಒತ್ತಿ ವಡೆಗಳನ್ನು ಮಾಡಿ, ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕಾಯಿಸಿ. 
  9. ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಕಾಯಿಸಿ. ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.

ಮಂಗಳವಾರ, ಮಾರ್ಚ್ 7, 2023

Sorekai dose recipe in Kannada | ಸೋರೆಕಾಯಿ ದೋಸೆ ಮಾಡುವ ವಿಧಾನ

 

Sorekai dose recipe in Kannada

Sorekai dose recipe in Kannada | ಸೋರೆಕಾಯಿ ದೋಸೆ ಮಾಡುವ ವಿಧಾನ 

ಸೋರೆಕಾಯಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ದೋಸೆ ಅಕ್ಕಿ
  2. 1/4 ಕಪ್ ಹೆಸರುಬೇಳೆ
  3.  1 ಕಪ್ ಸೋರೆಕಾಯಿ
  4. 2 ಹಸಿ ಮೆಣಸಿನಕಾಯಿ
  5. 1 ಸೆಮೀ ಉದ್ದದ ಶುಂಠಿ
  6. ಸ್ವಲ್ಪ ಕೊತ್ತಂಬರಿ ಸೊಪ್ಪು
  7. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  8. ಉಪ್ಪು ರುಚಿಗೆ ತಕ್ಕಷ್ಟು.

ಸೋರೆಕಾಯಿ ದೋಸೆ ಮಾಡುವ ವಿಧಾನ:

  1. ಅಕ್ಕಿ ಮತ್ತು ಬೇಳೆಯನ್ನು ನಾಲ್ಕು ಘಂಟೆಗಳ ಕಾಲ ನೆನೆಸಿಡಿ.
  2. ಸೋರೆಕಾಯಿಯನ್ನು ಸಿಪ್ಪೆ ತೆಗೆದು ಕತ್ತರಿಸಿಟ್ಟುಕೊಳ್ಳಿ.
  3. ನೆನೆಸಿದ ಅಕ್ಕಿ ಮತ್ತು ಬೇಳೆಯನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. 
  4. ಹಸಿಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ. 
  5. ಕೊತ್ತಂಬರಿ ಸೊಪ್ಪನ್ನು ಸೇರಿಸಿ. 
  6. ಕತ್ತರಿಸಿದ ಸೋರೆಕಾಯಿ ಸೇರಿಸಿ. 
  7. ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  8. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  9. ಹಿಟ್ಟು ತೆಳುವಾದ ಉದ್ದಿನ ದೋಸೆ ಹಿಟ್ಟಿನಂತಿರಲಿ. 
  10. ದೋಸೆ ಹೆಂಚನ್ನು ಬಿಸಿಮಾಡಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ. ಮೃದುವಾದ ದೋಸೆ ಬೇಕಾದಲ್ಲಿ ಜಾಸ್ತಿ ನೀರು ಸೇರಿಸಿ ನೀರು ದೋಸೆಯಂತೆ ಮಾಡಿದರಾಯಿತು. 
  11. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  12. 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ.
  13. ಸಣ್ಣ ಉರಿಯಲ್ಲಿ ಗರಿಗರಿ ಆಗುವವರೆಗೆ  ಕಾಯಿಸಿ. ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಮಾರ್ಚ್ 3, 2023

Dal fry recipe in Kannada | ದಾಲ್ ಫ್ರೈ ಮಾಡುವ ವಿಧಾನ

 

Dal fry recipe in Kannada

Dal fry recipe in Kannada | ದಾಲ್ ಫ್ರೈ ಮಾಡುವ ವಿಧಾನ 

ದಾಲ್ ಫ್ರೈ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೊಗರಿಬೇಳೆ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. ಒಂದು ಈರುಳ್ಳಿ
  5. 7 - 8 ಕರಿಬೇವಿನ ಎಲೆ
  6. 1 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
  7. 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  8. 1 ಟೊಮೇಟೊ
  9. 1/4 ಟೀಸ್ಪೂನ್ ಅರಶಿನ ಪುಡಿ
  10. 1 ಟೀಸ್ಪೂನ್ ಅಚ್ಚಖಾರದ ಪುಡಿ
  11. 1 ಟೀಸ್ಪೂನ್ ಗರಂ ಮಸಾಲಾ
  12. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  13. ಉಪ್ಪು ರುಚಿಗೆ ತಕ್ಕಷ್ಟು
  14. 1 ಟೇಬಲ್ ಚಮಚ ಅಡುಗೆ ಎಣ್ಣೆ

ದಾಲ್ ಫ್ರೈ ಮಾಡುವ ವಿಧಾನ:

  1. ತೊಗರಿಬೇಳೆಯನ್ನು ತೊಳೆದು, ಚಿಟಿಕೆ ಅರಿಶಿನ ಮತ್ತು ನಾಲ್ಕೈದು ಹನಿ ಎಣ್ಣೆ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
  2. ಬೇಯಿಸಿದ ಬೇಳೆಯನ್ನು ಸೌಟಿನಲ್ಲಿ ಮಸೆದು ಪಕ್ಕಕ್ಕಿಡಿ.  
  3. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಜೀರಿಗೆ ಹಾಕಿ ಒಗ್ಗರಣೆ ಮಾಡಿ. 
  4.  ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ. 
  5. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮಗುಚಿ. 
  6. ಕತ್ತರಿಸಿದ ಟೊಮೇಟೊ ಸೇರಿಸಿ, ಮೆತ್ತಗಾಗುವವರೆಗೆ ಹುರಿಯಿರಿ.
  7. ಅಚ್ಚಖಾರದ ಪುಡಿ ಮತ್ತು ಗರಂ ಮಸಾಲಾ ಸೇರಿಸಿ. 
  8. ಮಸಿದ ಬೇಳೆ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ.
  9. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ.
  10. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
  11. ಸ್ಟವ್ ಆಫ್ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ.

Related Posts Plugin for WordPress, Blogger...