Shenga hurigaalu recipe in Kannada | ಶೇಂಗಾ ಹುರಿಗಾಳು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಕಪ್ ಶೇಂಗಾ ಅಥವಾ ಕಡ್ಲೆಕಾಯಿ
- 2 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ)
- 1/4 ಟೀಸ್ಪೂನ್ ಮಾವಿನಕಾಯಿ ಪುಡಿ ಅಥವಾ 1 ಚಮಚ ನಿಂಬೆ ರಸ (ನಿಮ್ಮ ರುಚಿಗೆ ತಕ್ಕಂತೆ)
- 1/4 ಟೀಸ್ಪೂನ್ ಅರಶಿನ ಪುಡಿ
- ದೊಡ್ಡ ಚಿಟಿಕೆ ಇಂಗು
- ಉಪ್ಪು ರುಚಿಗೆ ತಕ್ಕಷ್ಟು
ಶೇಂಗಾ ಹುರಿಗಾಳು ಮಾಡುವ ವಿಧಾನ:
- ಒಂದು ದಪ್ಪ ತಳದ ಬಾಣಲೆಯಲ್ಲಿ ಶೇಂಗಾ ಅಥವಾ ಕಡಲೆಕಾಯಿಯನ್ನು ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಕೈ ಬಿಡದೇ ಹುರಿಯಿರಿ.
- ಹುರಿದ ಕಡಲೆಕಾಯಿಯನ್ನು ಒಂದು ಪಾತ್ರೆಗೆ ಹಾಕಿ.
- ನಂತರ ಒಂದು ಸಣ್ಣ ಬಟ್ಟಲಿನಲ್ಲಿ ಕೆಂಪು ಮೆಣಸಿನಕಾಯಿ ಪುಡಿ, ಮಾವಿನಕಾಯಿ ಪುಡಿ (ಅಥವಾ ನಿಂಬೆ ರಸ), ಅರಿಶಿನ, ಇಂಗು ಮತ್ತು ಉಪ್ಪುತೆಗೆದುಕೊಳ್ಳಿ.
- ೧ - ೨ ಟೇಬಲ್ ಚಮಚದಷ್ಟು ನೀರು ಸೇರಿಸಿ, ದಪ್ಪನಾದ ಮಸಾಲೆಯನ್ನು ಸಿದ್ಧ ಪಡಿಸಿಕೊಳ್ಳಿ.
- ಹುರಿದ ಶೇಂಗಾ ಸ್ವಲ್ಪ ಬಿಸಿ ಕಡಿಮೆ ಆದಮೇಲೆ ಮಸಾಲೆಯನ್ನು ಹಾಕಿ ಚೆನ್ನಾಗಿ ಕಲಸಿ.
- ಪುನಃ ಸ್ಟವ್ ಮೇಲಿಟ್ಟು ಶೇಂಗಾ ಒಣಗುವವರೆಗೆ ಹುರಿಯಿರಿ.
- ಸ್ಟವ್ ಆಫ್ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸಂಜೆ ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.