Thapale dose recipe in Kannada | ತಪಲೆ ದೋಸೆ ಮಾಡುವ ವಿಧಾನ
ತಪಲೆ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
- 1/2 ಕಪ್ ಅಕ್ಕಿ
- 1/2 ಕಪ್ ತೊಗರಿಬೇಳೆ
- 1/2 ಕಪ್ ತೆಂಗಿನತುರಿ
- 2 - 4 ಒಣಮೆಣಸಿನಕಾಯಿ
- 1/2 ಟೀಸ್ಪೂನ್ ಜೀರಿಗೆ
- 1/2 ಟೀಸ್ಪೂನ್ ಕರಿಮೆಣಸು
- ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
- ಉಪ್ಪು ರುಚಿಗೆ ತಕ್ಕಷ್ಟು.
ತಪಲೆ ದೋಸೆ ಮಾಡುವ ವಿಧಾನ:
- ಅಕ್ಕಿ ಮತ್ತು ಬೇಳೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
- ಅದಕ್ಕೆ ಜೀರಿಗೆ, ಕರಿಮೆಣಸು ಮತ್ತು ಒಣಮೆಣಸಿನಕಾಯಿ ಸೇರಿಸಿ.
- ಎಲ್ಲ ಪದಾರ್ಥಗಳನ್ನು ಎರಡು ಬಾರಿ ಚೆನ್ನಾಗಿ ತೊಳೆದು, ಅಗತ್ಯವಿದ್ದಷ್ಟು ನೀರು ಸೇರಿಸಿ 3 - 4 ಘಂಟೆ ನೆನೆಯಲು ಬಿಡಿ.
- ನೆನೆಸಿದ ಪದಾರ್ಥಗಳನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. ತೆಂಗಿನತುರಿಯನ್ನೂ ಸೇರಿಸಿ.
- ನೆನೆಸಲು ಬಳಸಿದ ನೀರನ್ನೇ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
- ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
- ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ.
- ದೋಸೆ ಹೆಂಚನ್ನು ಬಿಸಿಮಾಡಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ,
- ಮುಚ್ಚಳವನ್ನು ಮುಚ್ಚಿ ಬೇಯಿಸಿ.
- 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ.
- ಸಣ್ಣ ಉರಿಯಲ್ಲಿ ಗರಿಗರಿ ಆಗುವವರೆಗೆ ಕಾಯಿಸಿ. ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿರಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ