Kara boondi recipe in Kannada | ಖಾರ ಬೂಂದಿ ಮಾಡುವ ವಿಧಾನ
ಖಾರ ಬೂಂದಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ಕಡ್ಲೆಹಿಟ್ಟು
- 1/2 ಟೀಸ್ಪೂನ್ ಅಚ್ಚ ಖಾರದ ಪುಡಿ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- ದೊಡ್ಡ ಚಿಟಿಕೆ ಇಂಗು
- ದೊಡ್ಡ ಚಿಟಿಕೆಅರಿಶಿನ
- 1 ಟೀಸ್ಪೂನ್ ಉಪ್ಪು
- 1 ಟೇಬಲ್ ಚಮಚ ಬಿಸಿ ಎಣ್ಣೆ
- ಎಣ್ಣೆ ಖಾರ ಸೇವ್ ಕಾಯಿಸಲು
ಮಿಕ್ಸ್ಚರ್ ಮಾಡಲು ಬೇಕಾಗುವ ಪದಾರ್ಥಗಳು:
- 1/2 ಕಪ್ ಶೇಂಗಾ
- 1/2 ಕಪ್ ಹುರಿಗಡಲೆ
- ಸ್ವಲ್ಪ ಗೋಡಂಬಿ
- ಸ್ವಲ್ಪ ಕರಿಬೇವು
- ಅಚ್ಚ ಖಾರದ ಪುಡಿ ನಿಮ್ಮ ರುಚಿಗೆ ತಕ್ಕಂತೆ
- ಉಪ್ಪು ನಿಮ್ಮ ರುಚಿಗೆ ತಕ್ಕಂತೆ
ಖಾರ ಬೂಂದಿ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಚ್ಚಖಾರದ ಪುಡಿ, ಇಂಗು, ಅರಿಶಿನ ಮತ್ತು ಉಪ್ಪನ್ನು ಹಾಕಿ ಕಲಸಿ.
- 1 ಟೇಬಲ್ ಚಮಚ ಬಿಸಿ ಎಣ್ಣೆ ಹಾಕಿ ಕಲಸಿ.
- ಸ್ವಲ್ಪ ಸ್ವಲ್ಪ ನೀರು ಹಾಕಿ ತೆಳುವಾದ ಪೇಸ್ಟ್ ನಂತಹ ಹಿಟ್ಟು ಸಿದ್ಧಪಡಿಸಿಕೊಳ್ಳಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
- ಕಣ್ಣು ಸಟ್ಟುಗ ಬಳಸಿ ಬೂಂದಿ ಮಾಡಿ.
- ಮಧ್ಯಮ ಉರಿಯಲ್ಲಿ ಗುಳ್ಳೆಗಳು ನಿಲ್ಲುವವರೆಗೆ ಕಾಯಿಸಿ ತೆಗೆಯಿರಿ.
- ಶೇಂಗಾ ಹುರಿದು ಹಾಕಿ.
- ಹುರಿಗಡಲೆ ಹುರಿದು ಹಾಕಿ.
- ಗೋಡಂಬಿ ಮತ್ತು ಕರಿಬೇವು ಹುರಿದು ಹಾಕಿ.
- ಬೇಕಾದಲ್ಲಿ ಉಪ್ಪು ಮತ್ತು ಅಚ್ಚಖಾರದ ಪುಡಿ ಹಾಕಿ ಕಲಸಿ.