Idli mix recipe in Kannada | ಇಡ್ಲಿ ಮಿಕ್ಸ್ ಮಾಡುವ ವಿಧಾನ
ಇಡ್ಲಿ ಮಿಕ್ಸ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಇಡ್ಲಿರವೆ
- 1/2 ಕಪ್ ಉದ್ದಿನ ಬೇಳೆ
- 1/2 ಕಪ್ ಗಟ್ಟಿ ಅಥವಾ ಮೀಡಿಯಂ ಅವಲಕ್ಕಿ
- ಉಪ್ಪು ನಿಮ್ಮ ರುಚಿ ಪ್ರಕಾರ
ಇಡ್ಲಿ ಮಿಕ್ಸ್ ಮಾಡುವ ವಿಧಾನ:
- ಉದ್ದಿನಬೇಳೆಯನ್ನು ಬಿಸಿಯಾಗುವವರೆಗೆ ಹುರಿಯಿರಿ. ಘಮ ಬಂದರೆ ಸಾಕು, ಬಣ್ಣ ಬದಲಾಗುವುದು ಬೇಡ.
- ಬಿಸಿ ಆರಿದ ಮೇಲೆ ಹುರಿದ ಉದ್ದಿನಬೇಳೆಯನ್ನು ನುಣ್ಣಗೆ ಪುಡಿ ಮಾಡಿ ಒಂದು ಪಾತ್ರೆಗೆ ಹಾಕಿ.
- ನಂತರ ಅವಲಕ್ಕಿಯನ್ನು ನುಣ್ಣಗೆ ಪುಡಿ ಮಾಡಿ ಅದೇ ಪಾತ್ರೆಗೆ ಸೇರಿಸಿ.
- ಇಡ್ಲಿ ರವೆಯನ್ನು ಸೇರಿಸಿ. ಚೆನ್ನಾಗಿ ಕಲಸಿ.
- ಈ ಇಡ್ಲಿ ಮಿಕ್ಸ್ ಅನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ.
- ಇಡ್ಲಿ ಮಾಡಲು, ಅಗತ್ಯವಿದ್ದಷ್ಟು ಇಡ್ಲಿ ಮಿಕ್ಸ್ ತೆಗೆದುಕೊಳ್ಳಿ.
- ಸುಮಾರು ಒಂದೂವರೆ ಪಟ್ಟು ನೀರು ಸೇರಿಸಿ.
- ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ. ಹಿಟ್ಟು ಮಾಮೂಲಿ ಇಡ್ಲಿ ಹಿಟ್ಟಿಗಿಂತ ಸ್ವಲ್ಪ ತೆಳು ಇರಲಿ.
- ಮುಚ್ಚಳವನ್ನು ಮುಚ್ಚಿ 12 - 13 ಗಂಟೆಗಳ ಕಾಲ ಹಿಟ್ಟು ಹುದುಗಲು ಬಿಡಿ.
- ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
- ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
- ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಟ್ಟು, 10 - 12 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ.
- ಒಂದೈದು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆದು ಸಾಂಬಾರ್ ಮತ್ತು ಚಟ್ನಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ