Dodna dose recipe in Kannada | ದೊಡ್ನ ದೋಸೆ ಮಾಡುವ ವಿಧಾನ
ದೊಡ್ನ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
- 1 ಕಪ್ ದೋಸೆ ಅಕ್ಕಿ
- 1/2 ಕಪ್ ತೆಂಗಿನತುರಿ
- 1 ಕಪ್ ಅನ್ನ
- ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು
- 1/2 ಟೀಸ್ಪೂನ ಸಕ್ಕರೆ
- ಉಪ್ಪು ರುಚಿಗೆ ತಕ್ಕಷ್ಟು.
ದೊಡ್ನ ದೋಸೆ ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು 2 ಗಂಟೆಗಳ ಕಾಲ ನೆನೆಯಲು ಬಿಡಿ.
- ನೆನೆಸಿದ ನಂತರ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ.
- ತೆಂಗಿನಕಾಯಿ ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣಗೆ ಅರೆಯಿರಿ.
- ಅದಕ್ಕೆ ಬೇಯಿಸಿದ ಅನ್ನ ಸೇರಿಸಿ, ನುಣ್ಣಗೆ ಅರೆಯಿರಿ.
- ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ.
- ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 10 - 12 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
- ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ.
- ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ಸೆಟ್ ದೋಸೆಯಂತೆ ಸಣ್ಣ ಸಣ್ಣ ದೋಸೆ ಮಾಡಿ. ಹಿಟ್ಟನ್ನು ಜಾಸ್ತಿ ಹರಡಬೇಡಿ.
- ಮುಚ್ಚಳವನ್ನು ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ.
- ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ.
- ಬೇಕಾದಲ್ಲಿ ತಿರುವಿ ಹಾಕಿ ಇನ್ನೊಂದು ಬದಿ ಕಾಯಿಸಿ. ಚಟ್ನಿಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ