Avalakki habe kadubu recipe in Kannada | ಅವಲಕ್ಕಿ ಹಬೆಕಡುಬು ಮಾಡುವ ವಿಧಾನ
ಅವಲಕ್ಕಿ ಹಬೆಕಡುಬು ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಕಪ್ ಮೀಡಿಯಂ ಅವಲಕ್ಕಿ (ಅಥವಾ 1 ಕಪ್ ಗಟ್ಟಿ ಅವಲಕ್ಕಿ)
- 1/2 ಕಪ್ ತೊಗರಿಬೇಳೆ
- 1/2 ಕಪ್ ಕಡ್ಲೆಬೇಳೆ
- 1 - 2 ಹಸಿರು ಮೆಣಸಿನಕಾಯಿ
- 1/2 ಇಂಚು ಉದ್ದದ ಶುಂಠಿ
- 5 - 6 ಕರಿಬೇವಿನ ಎಲೆ
- 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1/2 ಕಪ್ ತೆಂಗಿನತುರಿ
- ನಿಮ್ಮ ರುಚಿ ಪ್ರಕಾರ ಉಪ್ಪು
ಅವಲಕ್ಕಿ ಹಬೆಕಡುಬು ಮಾಡುವ ವಿಧಾನ:
- ಬೇಳೆಗಳನ್ನು 3 - 4 ಘಂಟೆಗಳ ಕಾಲ ನೆನೆಸಿಡಿ.
- ಅವಲಕ್ಕಿಯನ್ನು ಸಂಪೂರ್ಣ ಮೆತ್ತಗಾಗವವರೆಗೆ ನೆನೆಸಿ, ನೀರು ಬಗ್ಗಿಸಿಡಿ.
- ಬೇಳೆಗಳು ನೆನೆದ ನಂತರ ನೀರು ಬಗ್ಗಿಸಿ, ಮಿಕ್ಸಿ ಜಾರಿಗೆ ಹಾಕಿ.
- ಅದಕ್ಕೆ ತೆಂಗಿನತುರಿ, ಶುಂಠಿ, ಹಸಿರುಮೆಣಸಿನಕಾಯಿ ಸೇರಿಸಿ.
- ನೀರು ಹಾಕದೆ ತರಿ ತರಿಯಾಗಿ ರುಬ್ಬಿ ಕೊಳ್ಳಿ.
- ಒಂದು ಅಗಲವಾದ ಪಾತ್ರೆಯಲ್ಲಿ ನೆನೆಸಿದ ಅವಲಕ್ಕಿ ಮತ್ತು ರುಬ್ಬಿದ ಮಿಶ್ರಣ ತೆಗೆದುಕೊಳ್ಳಿ.
- ಕತ್ತರಿಸಿದ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಂತೆ ಉಪ್ಪು ಹಾಕಿ ಕಲಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಕಾಲು ಕಪ್) ಮೆತ್ತಗಿನ ಮಿಶ್ರಣ ತಯಾರಿಸಿಕೊಳ್ಳಿ.
- ಬೇಕಾದ ಆಕಾರದಲ್ಲಿ ಉಂಡೆಗಳನ್ನು ಮಾಡಿ.
- 15 - 20 ನಿಮಿಷಗಳ ಕಾಲ ಹಬೆ ಅಥವಾ ಆವಿಯಲ್ಲಿ ಬೇಯಿಸಿ.
- ಚಟ್ನಿ ಅಥವಾ ಹಸಿ ಮಜ್ಜಿಗೆ ಯೊಂದಿಗೆ ಬಡಿಸಿ. ಹಾಗೆಯೂ ತಿನ್ನಬಹುದು.