Ulundogare recipe in Kannada | ಉಳುಂದೋಗರೆ ಮಾಡುವ ವಿಧಾನ
ಉಳುಂದೋಗರೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಅಕ್ಕಿ (ಸೋನಾಮಸೂರಿ)
- 1/4 ಕಪ್ ತೆಂಗಿನ ತುರಿ
- 4 ಟೀಸ್ಪೂನ್ ಉದ್ದಿನಬೇಳೆ
- 1/2 ಟೀಸ್ಪೂನ್ ಕಾಳುಮೆಣಸು
- 2 - 3 ಒಣ ಮೆಣಸಿನಕಾಯಿ
- 1/4 ಟೀಸ್ಪೂನ್ ತುಪ್ಪ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 4 - 6 ಕರಿಬೇವಿನ ಎಲೆ
- ಸ್ವಲ್ಪ ಗೋಡಂಬಿ
- 2 ಟೇಬಲ್ ಚಮಚ ತುಪ್ಪ
ಉಳುಂದೋಗರೆ ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು, 1/4 ಟೀಸ್ಪೂನ್ ತುಪ್ಪ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
- ಉದ್ದಿನಬೇಳೆ, ಕಾಳುಮೆಣಸು ಮತ್ತು ಒಣ ಮೆಣಸಿನಕಾಯಿಯನ್ನು ಉದ್ದಿನಬೇಳೆ ಹೊಂಬಣ್ಣ ಬರುವವರೆಗೆ ಹುರಿಯಿರಿ.
- ಬಿಸಿ ಆರಿದ ಮೇಲೆ ಪುಡಿ ಮಾಡಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ.
- ಸಾಸಿವೆ, ಗೋಡಂಬಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ತೆಂಗಿನತುರಿ ಸೇರಿಸಿ, ಹುರಿದು ಸ್ಟವ್ ಆಫ್ ಮಾಡಿ.
- ಬೇಯಿಸಿದ ಅನ್ನ ಸೇರಿಸಿ ಚೆನ್ನಾಗಿ ಕಲಸಿ.
- ನಂತರ ರುಚಿಗೆ ತಕ್ಕಂತೆ ಉಪ್ಪು ಮತ್ತು ಪುಡಿ ಮಾಡಿಟ್ಟ ಮಸಾಲೆ ಸೇರಿಸಿ.
- ಚೆನ್ನಾಗಿ ಕಲಸಿ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ