Tomato thokku recipe in Kannada | ಟೊಮೇಟೊ ತೊಕ್ಕು ಮಾಡುವ ವಿಧಾನ
ಟೊಮೇಟೊ ತೊಕ್ಕು ವಿಡಿಯೋ
ಬೇಕಾಗುವ ಪದಾರ್ಥಗಳು:
- 10 ಮಧ್ಯಮ ಗಾತ್ರದ ಟೊಮೇಟೊ
- 10 ಒಣಮೆಣಸಿನಕಾಯಿ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- 1 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಮೆಂತೆ
- 1/4 ಟೀಸ್ಪೂನ್ ಅರಿಶಿನ
- 3 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 4 ಟೇಬಲ್ ಚಮಚ ಅಡುಗೆ ಎಣ್ಣೆ
- 1 ಟೀಸ್ಪೂನ್ ಸಾಸಿವೆ
- 8 ಕರಿಬೇವಿನ ಎಲೆ
- 1/4 ಟೀಸ್ಪೂನ್ ಇಂಗು
ಟೊಮೇಟೊ ತೊಕ್ಕು ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಒಣಮೆಣಸಿನಕಾಯಿಯನ್ನು ಎಣ್ಣೆ ಹಾಕದೇ ಹುರಿಯಿರಿ.
- ನಂತರ ಸಾಸಿವೆ, ಜೀರಿಗೆ ಮತ್ತು ಮೆಂತೆಯನ್ನು ಸೇರಿಸಿ. ಮೆಂತೆ ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ
- ಬಿಸಿ ಆರಿದ ಮೇಲೆ ಪುಡಿ ಮಾಡಿಟ್ಟುಕೊಳ್ಳಿ.
- ಟೊಮ್ಯಾಟೊವನ್ನು ತೊಳೆದು, ದೊಡ್ಡದಾಗಿ ಕತ್ತರಿಸಿಕೊಳ್ಳಿ.
- ಕತ್ತರಿಸಿದ ಟೊಮ್ಯಾಟೊವನ್ನು ಮಿಕ್ಸಿಯಲ್ಲಿ ಅರೆದಿಟ್ಟು ಕೊಳ್ಳಿ.
- ನಂತರ ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ರುಬ್ಬಿದ ಟೊಮೇಟೊ ಹಾಕಿ ಮಗುಚಿ, ಕುದಿಯಲು ಇಡಿ.
- ಉಪ್ಪು ಮತ್ತು ಅರಿಶಿನ ಸೇರಿಸಿ.
- ಸ್ವಲ್ಪ ಗಟ್ಟಿಯಾಗುವವರೆಗೆ ಆಗಾಗ್ಯೆ ಮಗುಚುತ್ತಾ ಬೇಯಿಸಿ.
- ನೀರು ಆರಿದ ಮೇಲೆ ತಯಾರಿಸಿದ ಮಸಾಲೆ ಪುಡಿ ಹಾಕಿ ಮಗುಚಿ.
- ರುಚಿಗೆ ತಕ್ಕಂತೆ ಉಪ್ಪು ಮತ್ತು ಬೆಲ್ಲ ಹೊಂದಿಸಿಕೊಳ್ಳಿ.
- ನೀರಾರಿ ಎಣ್ಣೆ ಬಿಡಲು ಶುರುವಾದಾಗ ಸ್ಟವ್ ಆಫ್ ಮಾಡಿ.
- ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಎತ್ತಿಡಿ. ನೀರಾರುವವರೆಗೆ ಮಗುಚಿದಲ್ಲಿ ಹಲವು ತಿಂಗಳುಗಳ ಕಾಲ ಕೆಡುವುದಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ