Kadle bele usli recipe in Kannada | ಕಡಲೆಬೇಳೆ ಉಸ್ಲಿ ಮಾಡುವ ವಿಧಾನ
ಕಡಲೆಬೇಳೆ ಉಸ್ಲಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಕಡಲೆಬೇಳೆ
- 1 ಟೇಬಲ್ ಚಮಚ ಅಡುಗೆ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಉದ್ದಿನಬೇಳೆ
- ಒಂದು ಚಿಟಿಕೆ ಅರಿಶಿನ ಪುಡಿ
- ಒಂದು ಚಿಟಿಕೆ ಇಂಗು
- 4 - 5 ಕರಿಬೇವಿನ ಎಲೆ
- ಒಂದು ಸಣ್ಣ ಚೂರು ಶುಂಠಿ
- 1 - 2 ಹಸಿರು ಮೆಣಸಿನಕಾಯಿ
- 2 ಟೇಬಲ್ ಚಮಚ ತೆಂಗಿನ ತುರಿ
- 2 ಟೇಬಲ್ ಚಮಚ ಕೊತಂಬರಿ ಸೊಪ್ಪು
- 1/2 - 1 ಟೀಸ್ಪೂನ್ ಲಿಂಬೆ ರಸ (ಬೇಕಾದಲ್ಲಿ)
- ಉಪ್ಪು ರುಚಿಗೆ ತಕ್ಕಷ್ಟು.
ಕಡಲೆಬೇಳೆ ಉಸ್ಲಿ ಮಾಡುವ ವಿಧಾನ:
- ಕಡಲೆಬೇಳೆಯನ್ನು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ.
- ಅಗತ್ಯವಿದ್ದಷ್ಟು ನೀರು ಹಾಕಿ (ಒಂದೂವರೆ ಪಟ್ಟು), ಎರಡು ವಿಷಲ್ ಮಾಡಿ ಮೆತ್ತಗೆ ಬೇಯಿಸಿಕೊಳ್ಳಿ ಆದರೆ ಮುದ್ದೆಯಾಗುವುದು ಬೇಡ.
- ಬೇಯಿಸಿದ ನಂತರ ನೀರು ಬಸಿದು ಪಕ್ಕಕ್ಕಿಡಿ. ನಾನು ಈ ನೀರಿನಿಂದ ಸಾರು ಮಾಡುತ್ತೇನೆ.
- ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ.
- ಸಾಸಿವೆ ಸಿಡಿದ ಮೇಲೆ ಹಸಿರು ಮೆಣಸಿನಕಾಯಿ, ಕತ್ತರಿಸಿದ ಶುಂಠಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿ.
- ಅದಕ್ಕೆ ಅರಿಶಿನ ಪುಡಿ ಮತ್ತು ಇಂಗು ಸೇರಿಸಿ.
- ಅದಕ್ಕೆ ಬೇಯಿಸಿದ ಕಡಲೆಬೇಳೆ ಮತ್ತು ಉಪ್ಪನ್ನು ಹಾಕಿ ಮಗುಚಿ.
- ತೆಂಗಿನ ತುರಿ ಮತ್ತು ಕೊತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ.
- ಕೊನೆಯಲ್ಲಿ ಬೇಕಾದಲ್ಲಿ ಲಿಂಬೆರಸ ಸೇರಿಸಿ. ಚಹಾದೊಂದಿಗೆ ಆನಂದಿಸಿ.