Veelyadele saaru recipe in Kannada | ವೀಳ್ಯದೆಲೆ ಸಾರು ಮಾಡುವ ವಿಧಾನ
ವೀಳ್ಯದೆಲೆ ಸಾರು ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 2 - 5ವೀಳ್ಯದೆಲೆ
- 2 ಟೇಬಲ್ ಚಮಚ ತೊಗರಿಬೇಳೆ
- 1 ಟೊಮೇಟೊ
- 1/4 ಟೀಸ್ಪೂನ್ ಅರಿಶಿನ
- 1.5 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- 1 - 2 ಟೀಸ್ಪೂನ್ ಬೆಲ್ಲ
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 2 ಟೇಬಲ್ ಚಮಚ ಸಾರಿನ ಪುಡಿ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1/2 ಚಮಚ ಜೀರಿಗೆ
- 1 ಒಣಮೆಣಸಿನಕಾಯಿ
- ದೊಡ್ಡ ಚಿಟಿಕೆ ಇಂಗು
- 5 - 6 ಕರಿಬೇವಿನ ಎಲೆ
- 2 ಟೇಬಲ್ ಚಮಚ ಎಣ್ಣೆ
ವೀಳ್ಯದೆಲೆ ಸಾರು ಮಾಡುವ ವಿಧಾನ:
- ವೀಳ್ಯದೆಲೆಯನ್ನು ತೊಳೆದು, ತೊಟ್ಟು ತೆಗೆಯಿರಿ.
- ನಂತರ ವೀಳ್ಯದೆಲೆಯನ್ನು ಕೈಯಲ್ಲಿ ಚೂರು ಮಾಡಿ ಮಿಕ್ಸಿ ಜಾರಿಗೆ ಹಾಕಿ.
- ತೊಳೆದ ತೊಗರಿಬೇಳೆ ಮತ್ತು ಕತ್ತರಿಸಿದ ಟೊಮೇಟೊ ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣಗೆ ಅರೆಯಿರಿ.
- ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ ಮತ್ತು ಒಣಮೆಣಸಿನಕಾಯಿಯ ಒಗ್ಗರಣೆ ಮಾಡಿ.
- ಇಂಗು ಮತ್ತು ಕರಿಬೇವು ಸೇರಿಸಿ.
- ಅರೆದ ಪೇಸ್ಟ್ ಮತ್ತು ಅರಿಶಿಣವನ್ನು ಸೇರಿಸಿ.
- ಹಸಿ ವಾಸನೆ ಹೋಗುವವರೆಗೆ ಅಂದರೆ ಸುಮಾರು ಎರಡು ನಿಮಿಷ ಮಗುಚಿ ಬೇಯಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ.
- ಉಪ್ಪು, ಹುಳಿ ಮತ್ತು ಬೆಲ್ಲ ಸೇರಿಸಿ ಕುದಿಸಿ.
- ಕುದಿಯಲು ಶುರು ಆದ ಮೇಲೆ ಸಾರಿನ ಪುಡಿ ಹಾಕಿ. ಒಂದು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ.
- ಕೊತ್ತಂಬರಿ ಸೊಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ.
- ಬಿಸಿಯಾದ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ