Bhadang churumuri recipe in Kannada | ಭಡಂಗ್ ಮಂಡಕ್ಕಿ ಮಾಡುವ ವಿಧಾನ
ಭಡಂಗ್ ಮಂಡಕ್ಕಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 4 ಕಪ್ ಮಂಡಕ್ಕಿ
- 2 - 3 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ
- 7 - 8 ಬೆಳ್ಳುಳ್ಳಿ, ಸೀಳಿದ್ದು
- 7 - 8 ಕರಿಬೇವಿನ ಎಲೆ
- 1 ಟೀಸ್ಪೂನ್ ಬ್ಯಾಡಗಿ ಮೆಣಸಿನ ಪುಡಿ
- ದೊಡ್ಡ ಚಿಟಿಕೆ ಇಂಗು
- 2 - 3 ಟೇಬಲ್ ಚಮಚ ಎಣ್ಣೆ
- 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)
ಬಡಿಸಲು ಬೇಕಾಗುವ ಪದಾರ್ಥಗಳು:
- ಒಂದು ಈರುಳ್ಳಿ, ಸಣ್ಣಗೆ ಹೆಚ್ಚಿದ್ದು
- ಒಂದು ಟೊಮೇಟೊ ಸಣ್ಣಗೆ ಹೆಚ್ಚಿದ್ದು
- ಸ್ವಲ್ಪ ಕೊತ್ತಂಬರಿ ಸೊಪ್ಪು
ಭಡಂಗ್ ಮಂಡಕ್ಕಿ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ನೆಲಗಡಲೆಯನ್ನು ಹುರಿಯಿರಿ.
- ಅದಕ್ಕೆ ಸೀಳಿದ ಬೆಳ್ಳುಳ್ಳಿ ಮತ್ತು ಕರಿಬೇವನ್ನು ಹಾಕಿ ಹುರಿಯಿರಿ.
- ಉರಿ ಸಣ್ಣ ಮಾಡಿ ಅಥವಾ ಸ್ಟವ್ ಆಫ್ ಮಾಡಿರಿ.
- ನಂತರ ಕೆಂಪು ಮೆಣಸಿನ ಪುಡಿ ಮತ್ತು ಇಂಗು ಹಾಕಿ ಮಗುಚಿ.
- ನಂತರ ಮಂಡಕ್ಕಿ ಹಾಕಿ ಚೆನ್ನಾಗಿ ಮಗುಚಿ.
- ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ಸ್ಟವ್ ಹಚ್ಚಿ, ಸಣ್ಣ ಉರಿಯಲ್ಲಿ ಒಂದೆರಡು ನಿಮಿಷ ಹುರಿಯಿರಿ.
- ಮೇಲಿನಿಂದ ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮೇಟೊ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಸವಿಯಿರಿ. ಹಾಗೆಯೂ ತಿನ್ನಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ