ಬುಧವಾರ, ಮಾರ್ಚ್ 30, 2022

Bellulli tambli recipe in Kannada | ಬೆಳ್ಳುಳ್ಳಿ ತಂಬ್ಳಿ ಮಾಡುವ ವಿಧಾನ

 

Bellulli tambli recipe in Kannada

Bellulli tambli recipe in Kannada | ಬೆಳ್ಳುಳ್ಳಿ ತಂಬ್ಳಿ ಮಾಡುವ ವಿಧಾನ

ಬೆಳ್ಳುಳ್ಳಿ ತಂಬ್ಳಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಬೆಳ್ಳುಳ್ಳಿ
  2. 1 - 2 ಒಣ ಮೆಣಸಿನಕಾಯಿ
  3. 1/4 ಕಪ್ ತೆಂಗಿನ ತುರಿ
  4. 1/4 - 1/2 ಕಪ್ ಮೊಸರು ಅಥವಾ ಮಜ್ಜಿಗೆ
  5. 1 ಟೀಸ್ಪೂನ್ ಅಡುಗೆ ಎಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. ಸ್ವಲ್ಪ ಕರಿಬೇವು
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಬೆಳ್ಳುಳ್ಳಿ ತಂಬ್ಳಿ ಮಾಡುವ ವಿಧಾನ:

  1. ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಸಣ್ಣ ಚೂರುಗಳನ್ನಾಗಿ ಮಾಡಿಕೊಳ್ಳಿ. 
  2. ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಮೊದಲು ಒಣ ಮೆಣಸಿನಕಾಯಿಯನ್ನು ಹುರಿಯಿರಿ. 
  3. ನಂತರ ಚೂರು ಮಾಡಿದ ಬೆಳ್ಳುಳ್ಳಿಯನ್ನು ಹುರಿಯಿರಿ.
  4. ಒಂದು ಮಿಕ್ಸಿ ಜಾರ್ನಲ್ಲಿ ಹುರಿದ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ತೆಂಗಿನತುರಿ ತೆಗೆದುಕೊಂಡು, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  5.  ಕೊನೆಯಲ್ಲಿ ಉಪ್ಪು ಮತ್ತು ಮೊಸರು ಸೇರಿಸಿ ಒಂದೆರಡು ಸುತ್ತು ಅರೆಯಿರಿ. 
  6. ಒಂದು ಪಾತ್ರೆಗೆ ಬಗ್ಗಿಸಿ. ಸಾಸಿವೆ, ಕರಿಬೇವು ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಮಾರ್ಚ್ 25, 2022

Ragi uttappa recipe in Kannada | ರಾಗಿ ಉತ್ತಪ್ಪ ಮಾಡುವ ವಿಧಾನ

 

Ragi uttappa recipe in Kannada

Ragi uttappa recipe in Kannada | ರಾಗಿ ಉತ್ತಪ್ಪ ಮಾಡುವ ವಿಧಾನ

ರಾಗಿ ಉತ್ತಪ್ಪ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 3/4 ಕಪ್ ರಾಗಿ 
  2. 1/4 ಕಪ್ ದೋಸೆ ಅಕ್ಕಿ
  3. 1/4 ಕಪ್ ಉದ್ದಿನಬೇಳೆ
  4. 1 ಟೀಸ್ಪೂನ್ ಮೆಂತ್ಯ
  5. 1/4 - 1/2 ಕಪ್ ತೆಳು ಅವಲಕ್ಕಿ
  6. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  7. ಉಪ್ಪು ರುಚಿಗೆ ತಕ್ಕಷ್ಟು.

ಮೇಲಿನಿಂದ ಹಾಕಲು ಬೇಕಾಗುವ ಪದಾರ್ಥಗಳು:

  1. 2 - 3 ಈರುಳ್ಳಿ
  2. 2 ಟೇಬಲ್ ಚಮಚ ಕರಿಬೇವು 
  3. 2 - 3 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  4. 2 - 3 ಹಸಿಮೆಣಸಿನಕಾಯಿ
  5. ಉಪ್ಪು ರುಚಿಗೆ ತಕ್ಕಷ್ಟು.

ರಾಗಿ ಉತ್ತಪ್ಪ ಮಾಡುವ ವಿಧಾನ:

  1. ರಾಗಿ, ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು 4-5 ಗಂಟೆಗಳ ಕಾಲ ನೆನೆಯಲು ಬಿಡಿ. ರಾಗಿ ಹಿಟ್ಟು ಬಳಸುತ್ತೀರಾದಲ್ಲಿ ಅಕ್ಕಿ ಮತ್ತು ಉದ್ದಿನಬೇಳೆ ನೆನೆಸಿ, ಅರೆದ ಮೇಲೆ ಸೇರಿಸಬಹುದು. 
  2. ನೆನೆಸಿದ ನಂತರ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  3. ಅವಲಕ್ಕಿ ತೊಳೆದು ಸೇರಿಸಿ. ಗಟ್ಟಿ ಅವಲಕ್ಕಿ ಆದಲ್ಲಿ, 10 ನಿಮಿಷ ನೆನೆಸಿ ಸೇರಿಸಿ. 
  4. ಎಲ್ಲವನ್ನು ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  5. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 8-10 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  6. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  7. ಮೇಲಿನಿಂದ ಹಾಕಲು ಸಣ್ಣಗೆ ಹೆಚ್ಚಿದ ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು,  ಹಸಿಮೆಣಸಿನಕಾಯಿ ಮತ್ತು ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಕಲಸಿಟ್ಟು ಕೊಳ್ಳಿ. 
  8. ದೋಸೆ ಹೆಂಚನ್ನು ಬಿಸಿಮಾಡಿ. ಹಿಟ್ಟು ಸುರಿದು, ದಪ್ಪ ದೋಸೆ ಮಾಡಿ.
  9. ಮೇಲಿನಿಂದ ಈರುಳ್ಳಿ ಮಿಶ್ರಣ ಹಾಕಿ. 
  10. ಮುಚ್ಚಳವನ್ನು ಮುಚ್ಚಿ ಮಾಧ್ಯಮ ಉರಿಯಲ್ಲಿ ಬೇಯಿಸಿ.
  11. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ ಇನ್ನೊಂದು ಬದಿ ಕಾಯಿಸಿ. ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಮಾರ್ಚ್ 18, 2022

Masale avalakki rotti recipe Kannada | ಮಸಾಲೆ ಅವಲಕ್ಕಿ ರೊಟ್ಟಿ ಮಾಡುವ ವಿಧಾನ

 

Masale avalakki rotti recipe Kannada

Masale avalakki rotti recipe Kannada | ಮಸಾಲೆ ಅವಲಕ್ಕಿ ರೊಟ್ಟಿ ಮಾಡುವ ವಿಧಾನ

ಮಸಾಲೆ ಅಕ್ಕಿರೊಟ್ಟಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿಹಿಟ್ಟು
  2. 1/2 ಕಪ್ ತೆಳು ಅವಲಕ್ಕಿ
  3. 2 - 3  ಟೇಬಲ್ ಚಮಚ ಬಿಸಿ ನೀರು (ಬೇಕಾದಲ್ಲಿ)
  4. 1/2 ಟೀಸ್ಪೂನ್ ಜೀರಿಗೆ
  5. 2 ಟೇಬಲ್ ಸ್ಪೂನ್ ತೆಂಗಿನತುರಿ
  6. 1 - 2 ಟೀಸ್ಪೂನ್ ಅಚ್ಚಖಾರದ ಪುಡಿ
  7. 1 - 2 ಟೀಸ್ಪೂನ್ ಧನಿಯಾ ಪುಡಿ
  8. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  9. 1 ಟೇಬಲ್ ಸ್ಪೂನ್ ಹೆಚ್ಚಿದ ಕರಿಬೇವಿನ ಎಲೆ
  10. 2 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  11. ಉಪ್ಪು ರುಚಿಗೆ ತಕ್ಕಷ್ಟು
  12. ರೊಟ್ಟಿ ಮಾಡಲು ಎಣ್ಣೆ
  13. 15x15cm ಗಾತ್ರದ ದಪ್ಪ ಪ್ಲಾಸ್ಟಿಕ್ ಹಾಳೆ / ಬಾಳೆ ಎಲೆ

ಮಸಾಲೆ ಅವಲಕ್ಕಿ ರೊಟ್ಟಿ ಮಾಡುವ ವಿಧಾನ:

  1. ಅವಲಕ್ಕಿಯನ್ನು ತೊಳೆದು, ನೀರು ಬಸಿದು, ಚೆನ್ನಾಗಿ ಹಿಸುಕಿ.
  2. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಮತ್ತು ಹಿಸುಕಿದ ಅವಲಕ್ಕಿ ತೆಗೆದುಕೊಳ್ಳಿ. 
  3. ಅದಕ್ಕೆ ಕತ್ತರಿಸಿದ ಈರುಳ್ಳಿ , ತೆಂಗಿನತುರಿ ಮತ್ತು ಜೀರಿಗೆ ಸೇರಿಸಿ. 
  4. ನಂತ್ರ ಕತ್ತರಿಸಿದ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ. 
  5. ಅಚ್ಚಖಾರದ ಪುಡಿ ಮತ್ತು ಧನಿಯಾ ಪುಡಿ ಸೇರಿಸಿ ಚೆನ್ನಾಗಿ ಕಲಸಿ. 
  6. ಅಗತ್ಯವಿದ್ದಷ್ಟು ಬಿಸಿ ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
  7. ಒಂದು ಸಣ್ಣ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದು ಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟು ಇರಿಸಿ.
  8. ಈಗ ನಿಮ್ಮ ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ತಟ್ಟುತ್ತಾ ವೃತ್ತಾಕಾರದ ಅಕ್ಕಿ ರೊಟ್ಟಿಯನ್ನುಮಾಡಿ. ಆಗಾಗ್ಯೆ ಕೈ ಬೆರಳುಗಳಿಂದ ಎಣ್ಣೆ ಮುಟ್ಟುತ್ತಾ ರೊಟ್ಟಿ ತಟ್ಟುವುದರಿಂದ ಕೈಗೆ ಅಂಟುವುದಿಲ್ಲ.
  9. ಅಕ್ಕಿ ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ ಮೇಲೆ ಹಾಕಿ.
  10. ಮೇಲಿನಿಂದ ಎಣ್ಣೆ ಹಾಕಿ ಕಾಯಿಸಿ. ರೊಟ್ಟಿಯನ್ನು ತಿರುವಿ ಹಾಕಿ ಇನ್ನೊಂದು ಬದಿಯೂ ಕಾಯಿಸಿ. 
  11. ಚಟ್ನಿ ಅಥವಾ ಯಾವುದೇ ಗೊಜ್ಜಿನೊಂದಿಗೆ ಬಡಿಸಿ.

Related Posts Plugin for WordPress, Blogger...