ಗುರುವಾರ, ಮೇ 13, 2021

Akki kadubu and saaru recipe in Kannada | ಅಕ್ಕಿ ಕಡುಬು ಮತ್ತು ಸಾರು ಮಾಡುವ ವಿಧಾನ

 

Aki kadubu and saaru recipe in Kannada

Akki kadubu and saaru recipe in Kannada | ಅಕ್ಕಿ ಕಡುಬು ಮತ್ತು ಸಾರು ಮಾಡುವ ವಿಧಾನ 

ಅಕ್ಕಿ ಕಡುಬು ಮತ್ತು ಸಾರು ವಿಡಿಯೋ

ಅಕ್ಕಿ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 2.5 ಕಪ್ ನೀರು 
  3. ಉಪ್ಪು ರುಚಿಗೆ ತಕ್ಕಷ್ಟು

ಸಾರಿಗೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 2 ಟೊಮ್ಯಾಟೊ
  2. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  3. 1 ಟೀಸ್ಪೂನ್ ಬೆಲ್ಲ (ನಿಮ್ಮ ರುಚಿಗೆ ತಕ್ಕಷ್ಟು - ಆದರೆ ಹಾಕಲು ಮರೆಯದಿರಿ)
  4. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  5. 1 ಹಸಿರು ಮೆಣಸಿನಕಾಯಿ
  6. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣಮೆಣಸಿನಕಾಯಿ
  2. 1/2 ಚಮಚ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. ಇಂಗು ಒಂದು ಚಿಟಿಕೆ
  5. 5 - 6 ಕರಿಬೇವಿನ ಎಲೆ
  6. 2 ಟೀಸ್ಪೂನ್ ಅಡುಗೆ ಎಣ್ಣೆ

ಅಕ್ಕಿ ಕಡುಬು ಮತ್ತು ಸಾರು ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ಅಗಲವಾದ ಪಾತ್ರೆಯಲ್ಲಿ ಹರಡಿ ನೀರಾರಲು ಬಿಡಿ. 
  2. ನಂತರ ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಕೆಲವು ಸೆಕೆಂಡ್ ಗಳ ಕಾಲ ಮಿಕ್ಸಿ ಮಾಡಿದರೆ ಸಾಕಾಗುತ್ತದೆ. 
  3. ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  4. ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ತರಿ ಅಥವಾ ರವೆಯನ್ನು ಹಾಕುತ್ತಾ ದೋಸೆ ಸಟ್ಟುಗ ಉಪಯೋಗಿಸಿ ಗಂಟಾಗದಂತೆ ಮಗುಚಿ. 
  5. ಮಧ್ಯಮ ಉರಿಯಲ್ಲಿ ತೆಳು ಪೇಸ್ಟ್ ಆಗುವವವರೆಗೆ ಮಗುಚಿ. ತುಂಬ ಗಟ್ಟಿಯಾಗುವುದು ಬೇಡ. ತುಂಬ ಕಡಿಮೆ ಸಮಯ ಸಾಕಾಗುತ್ತದೆ. 
  6. ತಟ್ಟೆ ಅಥವಾ ಪ್ಲೇಟ್ ಗೆ ತುಪ್ಪ ಹಚ್ಚಿ ಹಿಟ್ಟನ್ನು ಹಾಕಿ. 
  7. ಸೆಕೆಯಲ್ಲಿ (ಆವಿಯಲ್ಲಿ) 15 ನಿಮಿಷ ಬೇಯಿಸಿ.
  8. ಸಾರು ಮಾಡಲು ಟೊಮ್ಯಾಟೊವನ್ನು ದೊಡ್ಡದಾಗಿ ಕತ್ತರಿಸಿ, ಮಿಕ್ಸಿಯಲ್ಲಿ ತೆಂಗಿನತುರಿಯೊಂದಿಗೆ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
  9. ಅರೆದ ಟೊಮ್ಯಾಟೊವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಅರಿಶಿನ ಪುಡಿ ಹಾಕಿ ಕುದಿಯಲು ಇಡಿ. 
  10. ಬೆಲ್ಲ ಮತ್ತು ಹುಣಿಸೇಹಣ್ಣು ಸೇರಿಸಿ. ಕುದಿಯುವುದನ್ನು ಮುಂದುವರೆಸಿ. 
  11. ಸೀಳಿದ ಹಸಿರುಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ. ಮಂದ ಉರಿಯಲ್ಲಿ ಕುದಿಯಲು ಬಿಡಿ.
  12. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. 
  13.  ಒಂದು ಚಮಚ ಸಾರಿನ ಪುಡಿ ಹಾಕಿ ಕುದಿಸಿ. ಸ್ಟವ್ ಆಫ್  ಮಾಡಿ 
  14. ಎಣ್ಣೆ, ಒಣಮೆಣಸಿನಕಾಯಿ, ಸಾಸಿವೆ, ಜೀರಿಗೆ,  ಇಂಗು ಮತ್ತು ಕರಿಬೇವಿನ ಎಲೆಯ ಒಗ್ಗರಣೆ ಮಾಡಿ. 
  15. ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ.  ಬಿಸಿಯಾದ ಕಡುಬಿನೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...