ಮಂಗಳವಾರ, ಮೇ 18, 2021

2 ingredient laddu recipe in Kannada | ಶೇಂಗಾ ಅಥವಾ ಕಡಲೆಕಾಯಿ ಉಂಡೆ ಮಾಡುವ ವಿಧಾನ

 

2 ingredient laddu recipe in Kannada

2 ingredient laddu recipe in Kannada | ಶೇಂಗಾ ಅಥವಾ ಕಡಲೆಕಾಯಿ ಉಂಡೆ ಮಾಡುವ ವಿಧಾನ 

ಶೇಂಗಾ ಅಥವಾ ಕಡಲೆಕಾಯಿ ಉಂಡೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಶೇಂಗಾ ಅಥವಾ ನೆಲಗಡಲೆ
  2. 1/4 ಕಪ್ ಬೆಲ್ಲ

ಶೇಂಗಾ ಅಥವಾ ನೆಲಗಡಲೆ ಉಂಡೆ ಮಾಡುವ ವಿಧಾನ:

  1. ಒಂದು ದಪ್ಪ ತಳದ ಬಾಣಲೆಯಲ್ಲಿ ಶೇಂಗಾ ಅಥವಾ ಕಡಲೆಕಾಯಿಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. 
  2. ಬಿಸಿ ಆರಿದ ಮೇಲೆ ಸಿಪ್ಪೆ ತೆಗೆಯಿರಿ. 
  3. ಮಿಕ್ಸಿಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿ. ತುಂಬ ಹೊತ್ತು ಮಿಕ್ಸಿ ರನ್ ಮಾಡಬೇಡಿ. 
  4. ನಂತರ ಪುಡಿ ಮಾಡಿದ ಬೆಲ್ಲ ಹಾಕಿ ಪುನಃ ಪಲ್ಸ್ ಬಟನ್ ಉಪಯೋಗಿಸಿ 3 - 4 ಸಲ ಬುರ್-ಬುರ್ ಮಾಡಿ.
  5. ಮಿಕ್ಸಿ ಜಾರಿನ ಬದಿಯನ್ನು ಹೆರೆಸಿ ಒಟ್ಟು ಮಾಡಿ, ಪುನಃ ಪುಡಿ ಮಾಡಿ. 
  6. ಹೀಗೆ 3 - 4 ಸಲ ಶೇಂಗಾ ಸ್ವಲ್ಪ ಎಣ್ಣೆ ಬಿಡುವವರೆಗೆ ಪುಡಿ ಮಾಡಿ. 
  7. ಒಂದು ಬಟ್ಟಲಿಗೆ ಪುಡಿ ಮಾಡಿದ ಶೇಂಗಾ ಮತ್ತು ಬೆಲ್ಲದ ಮಿಶ್ರಣ ಹಾಕಿ. ಒಮ್ಮೆ ಕಲಸಿ. 
  8. ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಉಂಡೆ ಮಾಡಿ. ಸವಿದು ಆನಂದಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...