Soft chapati dough in 1 minute in Kannada | 1 ನಿಮಿಷದಲ್ಲಿ ಚಪಾತಿ ಹಿಟ್ಟು ಕಲಸುವ ವಿಧಾನ
1 ನಿಮಿಷದಲ್ಲಿ ಚಪಾತಿ ಹಿಟ್ಟು ಕಲಸುವ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಗೋಧಿ ಹಿಟ್ಟು
- 1/2 ಕಪ್ ನೀರು
- 2 ಟೀಸ್ಪೂನ್ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
1 ನಿಮಿಷದಲ್ಲಿ ಚಪಾತಿ ಹಿಟ್ಟು ಕಲಸುವ ವಿಧಾನ:
- ಗೋಧಿ ಹಿಟ್ಟು, ಒಂದು ಚಮಚ ಎಣ್ಣೆ ಮತ್ತು ಉಪ್ಪನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
- ಅಳತೆ ಪ್ರಕಾರ ನೀರನ್ನು ಒಮ್ಮೆ ಸೇರಿಸಿ.
- ನಂತರ ಕೈಯನ್ನು ಮಿಕ್ಸಿ ರೀತಿ ವೃತ್ತಾಕಾರವಾಗಿ ಸ್ವಲ್ಪ ಬಲ ಹಾಕಿ ತಿರುಗಿಸಿ. ಸುಮಾರು ಮೂವತ್ತು ಸೆಕೆಂಡ್ ಗಳಲ್ಲಿ ಹಿಟ್ಟು ಕಲಸಿ ಆಗುತ್ತದೆ. ಮೇಲಿನ ವಿಡಿಯೋ ಒಮ್ಮೆ ನೋಡಿ.
- ಕೊನೆಯಲ್ಲಿ ಇನ್ನೊಂದು ಚಮಚ ಎಣ್ಣೆ ಸೇರಿಸಿ ಪುನಃ ಕಲಸಿ.
- ಹದಿನೈದು ನಿಮಿಷ ನೆನೆಯಲು ಬಿಡಿ.
- ನಂತರ ಕಲಸಿಟ್ಟ ಚಪಾತಿ ಹಿಟ್ಟಿನಿಂದ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಲಟ್ಟಿಸಿ.
- ಲಟ್ಟಿಸಿದ ಚಪಾತಿಯನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ.
- ನಿಮ್ಮಿಷ್ಟದ ಗೊಜ್ಜಿನೊಂದಿಗೆ ಬಡಿಸಿ.