Uddina bonda recipe in Kannada | ಉದ್ದಿನ ಬೋಂಡಾ ಮಾಡುವ ವಿಧಾನ
ಉದ್ದಿನ ಬೋಂಡಾ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಉದ್ದಿನಬೇಳೆ
- ಸುಮಾರು 1/4 ಕಪ್ ನೀರು
- 1 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ
- 1 ಟೇಬಲ್ ಚಮಚ ಹೆಚ್ಚಿದ ಕರಿಬೇವಿನ ಎಲೆ
- 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 2 ಟೇಬಲ್ ಚಮಚ ಹೆಚ್ಚಿದ ತೆಂಗಿನ ಕಾಯಿ
- 1 ಟೇಬಲ್ ಚಮಚ ಅಕ್ಕಿ ಹಿಟ್ಟು
- ನಿಮ್ಮ ರುಚಿ ಪ್ರಕಾರ ಉಪ್ಪು
ಉದ್ದಿನ ಬೋಂಡಾ ಮಾಡುವ ವಿಧಾನ:
- ಉದ್ದಿನಬೇಳೆಯನ್ನು ತೊಳೆದು 2 ಘಂಟೆಗಳ ಕಾಲ ನೆನೆಸಿಡಿ.
- ಉದ್ದಿನಬೇಳೆ ನೆನೆದ ನಂತರ ನೀರು ಬಗ್ಗಿಸಿ.
- ಸ್ವಲ್ಪ ಸ್ವಲ್ಪವೇ ನೀರು ಹಾಕಿ ಮಿಕ್ಸಿಯಲ್ಲಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಸುಮಾರು 1/4 ಕಪ್ ನಷ್ಟು ನೀರು ಸೇರಿಸಬಹುದು.
- ರುಬ್ಬಿದ ಹಿಟ್ಟನ್ನು ಪಾತ್ರೆಗೆ ಹಾಕಿ.
- ನಂತರ ಹೆಚ್ಚಿದ ಹಸಿರುಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ ಮತ್ತು ತೆಂಗಿನಕಾಯಿ ಹಾಕಿ ಕಲಸಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿ.
- ಬೇಕಾದಲ್ಲಿ ಒಂದು ಟೇಬಲ್ ಚಮಚ ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಕಲಸಿ. ಅಕ್ಕಿ ಹಿಟ್ಟು ಹಾಕಿದಲ್ಲಿ ಬೋಂಡಾ ಎಣ್ಣೆ ಎಳೆಯುವುದಿಲ್ಲ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
- ಈಗ ಕೈಗೆ ನೀರು ಮುಟ್ಟಿಸಿಕೊಂಡು, ಸ್ವಲ್ಪ-ಸ್ವಲ್ಪ ಹಿಟ್ಟನ್ನು ಬೋಂಡಾ ಆಕಾರದಲ್ಲಿ ಹಾಕಿ. ಬಿಸಿ ಎಣ್ಣೆಯಲ್ಲಿ ಕಾಯಿಸಿ.
- ಚಟ್ನಿ ಮತ್ತು ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ