ಬುಧವಾರ, ನವೆಂಬರ್ 11, 2015

Radish chutney Recipe in Kannada | moolangi chutney | ಮೂಲಂಗಿ ಚಟ್ನಿ ಮಾಡುವ ವಿಧಾನ

Radish chutney Recipe in Kannada

Radish chutney Recipe in Kannada | moolangi chutney | ಮೂಲಂಗಿ ಚಟ್ನಿ ಮಾಡುವ ವಿಧಾನ 

ಮೂಲಂಗಿ ಚಟ್ನಿಯನ್ನು ಹಸಿ ಮೂಲಂಗಿ, ತೆಂಗಿನ ಕಾಯಿ ಮತ್ತು ಕೆಲವು ಮಸಾಲೆ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದೊಂದು ಸರಳ ಅಡುಗೆಯಾಗಿದ್ದು ಬಿಸಿ ಅನ್ನದೊಂದಿಗೆ ತಿನ್ನಲು ಬಲು ರುಚಿ ಮತ್ತು ಸಮಯದ ಅಭಾವವಿರುವಾಗ ಸುಲಭವಾಗಿ ತಯಾರಿಸಬಹುದಾಗಿದೆ.
ಮೂಲಂಗಿಯಲ್ಲಿ ಸಿ ವಿಟಮಿನ್ ಹೇರಳವಾಗಿದ್ದು, ಅನೇಕ ಖಾಯಿಲೆಗಳಿಗೆ ರಾಮಬಾಣವಾಗಿದೆ. ಮೂಲಂಗಿಯ ನಿಯಮಿತ ಸೇವನೆಯು ಮಲಬದ್ದತೆ, ಅರಶಿನ ಕಾಮಾಲೆ, ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಹೀಗೆ ಅನೇಕ ಖಾಯಿಲೆಗಳನ್ನು ದೂರವಿಡಲು ಸಹಕಾರಿಯಾಗಿದೆ. ಬೇರೆ ಚಟ್ನಿಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : 2 ಜನರಿಗೆ

ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

 1. 1 ಮಧ್ಯಮ ಗಾತ್ರದ ಮೂಲಂಗಿ 
 2. 1-2 ಒಣ ಮೆಣಸಿನಕಾಯಿ 
 3. 1/4 ಟೀಸ್ಪೂನ್ ಕೊತ್ತಂಬರಿ ಬೀಜ 
 4. 1/4 ಕಪ್ ತೆಂಗಿನ ತುರಿ 
 5. ಹುಣಸೆ ಹಣ್ಣು ಒಂದು ಸಣ್ಣ ತುಂಡು 
 6. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

 1. 1/2 ಒಣ ಮೆಣಸಿನಕಾಯಿ 
 2. 1/4 ಟೀಸ್ಪೂನ್ ಸಾಸಿವೆ 
 3. 4 - 5 ಕರಿಬೇವಿನ ಎಲೆ 
 4. 1 ಟೀಸ್ಪೂನ್ ಅಡುಗೆ ಎಣ್ಣೆ

ಮೂಲಂಗಿ ಚಟ್ನಿ ಪಾಕವಿಧಾನ:

 1. ಮೂಲಂಗಿಯನ್ನು ತೊಳೆದು ತುರಿದಿಟ್ಟುಕೊಳ್ಳಿ. 
 2. ಒಂದು ಮಿಕ್ಸಿ ಜಾರ್ ತೆಗೆದುಕೊಂಡು, ತೆಂಗಿನ ಕಾಯಿ, ಒಣ ಮೆಣಸು, ಕೊತ್ತಂಬರಿ ಬೀಜ, ಉಪ್ಪು ಮತ್ತು ಹುಣಿಸೆಹಣ್ಣು ಹಾಕಿ, ಸ್ವಲ್ಪ ನೀರಿನಲ್ಲಿ ರುಬ್ಬಿ ಕೊಳ್ಳಿ. 
 3. ಈಗ ಅದೇ ಮಿಕ್ಸಿ ಜಾರಿಗೆ ತುರಿದ ಮೂಲಂಗಿ ಹಾಕಿ 5 ಸೆಕೆಂಡ್ ಗಳ ಕಾಲ ರುಬ್ಬಿರಿ. 
 4. ರುಬ್ಬಿದ ಚಟ್ನಿಯನ್ನು ಒಂದು ಬಟ್ಟಲಿಗೆ ಹಾಕಿ. ಎಣ್ಣೆ, ಸಾಸಿವೆ, ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...