ಬುಧವಾರ, ನವೆಂಬರ್ 25, 2015

Bendekayi palya in Kannada | ಬೆಂಡೆಕಾಯಿ ಪಲ್ಯ ಮಾಡುವ ವಿಧಾನ


ಬೆಂಡೆಕಾಯಿ ಪಲ್ಯ ಮಾಡುವ ವಿಧಾನ 

ಈ ರೀತಿಯ ಬೆಂಡೆಕಾಯಿ ಪಲ್ಯವನ್ನು ನೀವು ದಕ್ಷಿಣ ಕರ್ನಾಟಕ ದಲ್ಲಿ ಕಾಣಬಹುದು. ಕೆಲವರು ಈ ಪಲ್ಯವನ್ನು ಬೆಲ್ಲ ಹಾಕದೆ ಅಥವಾ ತೆಂಗಿನ ಕಾಯಿ ರುಬ್ಬದೆ ಮಾಡುತ್ತಾರೆ. ನೀವು ನಿಮ್ಮ ರುಚಿಗೆ ತಕ್ಕಂತೆ ಮಾಡಬಹುದು. ಆದರೆ ಈ ರೀತಿಯ ಪಲ್ಯ ಬಹಳ ರುಚಿಯಾಗಿದ್ದು, ಚಪಾತಿ ಅಥವಾ ಅನ್ನದೊಂದಿಗೆ ತಿನ್ನಲು ರುಚಿಯಾಗಿರುತ್ತದೆ. ಬೆಂಡೆಕಾಯಿಯಲ್ಲಿ ಅನೇಕ ಆರೋಗ್ಯ ದಾಯಕ ಅಂಶಗಳಿದ್ದು, ಈ ಅಡುಗೆಯನ್ನು ನೀವು ಒಮ್ಮೆ ಪ್ರಯತ್ನಿಸ ಬಾರದೇಕೆ?
ಬೆಂಡೆಕಾಯಿ ಪಲ್ಯ ವಿಡಿಯೋ
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ : 2 ಜನರಿಗೆ

ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

 1. 250 ಗ್ರಾಂ ಬೆಂಡೆಕಾಯಿ
 2. 1 ಟೀಸ್ಪೂನ್ ಉದ್ದಿನ ಬೇಳೆ
 3. 1 ಟೀಸ್ಪೂನ್ ಕಡ್ಲೆ ಬೇಳೆ
 4. 4 ಟೀಸ್ಪೂನ್ ಅಡುಗೆ ಎಣ್ಣೆ
 5. 1/2 ಟೀಸ್ಪೂನ್ ಸಾಸಿವೆ
 6. 1 ಚಿಟಿಕೆ ಅರಿಶಿನ ಪುಡಿ
 7. 1 ಚಿಟಿಕೆ ಇಂಗು
 8. 4 - 5 ಕರಿಬೇವಿನ ಎಲೆ
 9. ಹುಣಸೆ ಹಣ್ಣು ಅರ್ಧ ನಿಂಬೆ ಗಾತ್ರ
 10. ಬೆಲ್ಲ ಅರ್ಧ ನಿಂಬೆ ಗಾತ್ರ
 11. 1-2 ಒಣ ಮೆಣಸಿನ ಕಾಯಿ
 12. 1/2 ಕಪ್ ತೆಂಗಿನ ತುರಿ
 13. ಉಪ್ಪು ರುಚಿಗೆ ತಕ್ಕಷ್ಟು
 14. ಕಪ್ ನೀರು ಹುಣಿಸೆ ಹಣ್ಣಿನ ರಸಕ್ಕೆ

ಬೆಂಡೆಕಾಯಿ ಪಲ್ಯ ಮಾಡುವ ವಿಧಾನ:

 1. ಬೆಂಡೆಕಾಯಿ ತೊಳೆದು, ತುದಿ ಮತ್ತು ಬುಡ ತೆಗೆದು, 1/2 ಸೆಮೀ ಉದ್ದಕ್ಕೆ ಕತ್ತರಿಸಿಕೊಳ್ಳಿ.
 2. ಒಂದು ಬಾಣಲೆ ತೆಗೆದುಕೊಂಡು, ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಅರಶಿನ, ಇಂಗು ಮತ್ತು ಕರಿಬೇವಿನ ಎಲೆ ಹಾಕಿ.
 3. ನಂತರ ಕತ್ತರಿಸಿದ ಬೆಂಡೆಕಾಯಿ ಹಾಕಿ, ಮಗುಚಿ. ಉಪ್ಪು, ಬೆಲ್ಲ ಮತ್ತು ಹುಣಿಸೆ ರಸ ಹಾಕಿ, ಮಂದ ಉರಿಯಲ್ಲಿ ಬೇಯಲು ಬಿಡಿ. ಆಗಾಗ ಮಗುಚುತ್ತಾ ಇರಿ.
 4. ಈ ಸಮಯದಲ್ಲಿ ಒಂದು ಮಿಕ್ಸಿ ಜಾರ್ ತೆಗೆದುಕೊಂಡು, ತೆಂಗಿನ ತುರಿ, 1/4 ಚಮಚ ಸಾಸಿವೆ ಮತ್ತು ಒಣ ಮೆಣಸು ಹಾಕಿ, ನೀರು ಹಾಕದೆ ಪುಡಿ ಮಾಡಿ.
 5. ಬೆಂಡೆಕಾಯಿ ಬೇಯುವವರೆಗೆ ಕಾಯಿರಿ.
 6. ಈಗ ಪುಡಿ ಮಾಡಿದ ಮಸಾಲೆ ಹಾಕಿ, 2 ನಿಮಿಷ ಮಗುಚಿ. ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...