Tasty rice breakfast recipe in Kannada | ಅಕ್ಕಿಯಿಂದ ರುಚಿಕರ ತಿಂಡಿ ಮಾಡುವ ವಿಧಾನ
ರುಚಿಕರ ತಿಂಡಿ ವಿಡಿಯೋ
ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿ
- 1 ಮಧ್ಯಮ ಗಾತ್ರದ ಆಲೂಗಡ್ಡೆ
- 1/2 ಟೀಸ್ಪೂನ್ ಜೀರಿಗೆ
- 1 ಹಸಿಮೆಣಸಿನಕಾಯಿ
- 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
- 1 ಟೇಬಲ್ ಚಮಚ ಕರಿಬೇವು
- 1 ಸಣ್ಣಗೆ ಹೆಚ್ಚಿದ ಈರುಳ್ಳಿ
- 1/4 ಕಪ್ ತುರಿದ ಕ್ಯಾರಟ್
- 1/4 ಕಪ್ ಸಣ್ಣಗೆ ಹೆಚ್ಚಿದ ದೊಣ್ಣೆಮೆಣಸು
- 1/4 ಕಪ್ ಸಣ್ಣಗೆ ಹೆಚ್ಚಿದ ಟೊಮೇಟೊ
- 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 2 ಟೇಬಲ್ ಚಮಚ ಮೊಸರು
- 1/2 ಟೀಸ್ಪೂನ್ ಏನೊ ಫ್ರೂಟ್ ಸಾಲ್ಟ್ ಅಥವಾ ಸೋಡಾ
- 8 ಚಮಚ ಎಣ್ಣೆ
- 1 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
ಅಕ್ಕಿಯಿಂದ ರುಚಿಕರ ತಿಂಡಿ ಮಾಡುವ ವಿಧಾನ:
- ಅಕ್ಕಿಯನ್ನು 4 - 5 ಘಂಟೆ ನೆನೆಸಿ.
- ನೆನೆಸಿದ ನಂತರ ನೀರು ಬಸಿಯಿರಿ. ಅರ್ಧ ಕಪ್ ನೀರು ಸೇರಿಸಿ ನುಣ್ಣಗೆ ಅರೆಯಿರಿ.
- ಬೇಯಿಸಿದ ಆಲೂಗಡ್ಡೆ ಸೇರಿಸಿ, ಇನ್ನೊಂದು ಅರ್ಧ ಕಪ್ ನೀರು ಸೇರಿಸಿ ಪುನಃ ನುಣ್ಣಗೆ ಅರೆಯಿರಿ.
- ಅರೆದ ಹಿಟ್ಟನ್ನು ಒಂದು ಪಾತ್ರೆಗೆ ತೆಗೆದುಕೊಂಡು, ಉಪ್ಪು, ಜೀರಿಗೆ, ಸಣ್ಣಗೆ ಹೆಚ್ಚಿದ ಶುಂಠಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ.
- ಸಣ್ಣಗೆ ಹೆಚ್ಚಿದ ಈರುಳ್ಳಿ, ದೊಣ್ಣೆಮೆಣಸಿನಕಾಯಿ, ಟೊಮೇಟೊ, ತುರಿದ ಕ್ಯಾರಟ್ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ, ಚೆನ್ನಾಗಿ ಕಲಸಿ.
- ಕೊನೆಯಲ್ಲಿ ಮೊಸರು ಮತ್ತು ಏನೊ ಫ್ರೂಟ್ ಸಾಲ್ಟ್ (ಅಥವಾ ಸೋಡಾ) ಸೇರಿಸಿ ಕಲಸಿ.
- ಒಂದು ಬಾಣಲೆ ಅಥವಾ ತವ ಮೇಲೆ ಎಣ್ಣೆ ಹಾಕಿ, ಹಿಟ್ಟು ಸುರಿದು, ಸ್ವಲ್ಪ ದಪ್ಪನಾಗಿ ಬಾಣಲೆ ದೋಸೆಯಂತೆ ಮಾಡಿ.
- ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಕಾಯಿಸಿ.
- ತಿರುಗಿಸಿ ಹಾಕಿ ಇನ್ನೊಂದು ಬದಿಯೂ ಕಾಯಿಸಿ.
- ಚಟ್ನಿ ಅಥವಾ ಟೊಮೇಟೊ ಸಾಸ್ ನೊಂದಿಗೆ ಬಡಿಸಿ.
ಧನ್ಯವಾದಗಳು. ಮಾಡಲು ಪ್ರಯತ್ನಿಸುವೆ. - ಸತೀಶ ರೆಡ್ಡಿ
ಪ್ರತ್ಯುತ್ತರಅಳಿಸಿ