Kuttavalakki recipe in Kannada | ಕುಟ್ಟವಲಕ್ಕಿ ಮಾಡುವ ವಿಧಾನ
ಕುಟ್ಟವಲಕ್ಕಿ ವಿಡಿಯೋ
ಪುಡಿ ಮಾಡಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಕಪ್ ಮೀಡಿಯಂ ಅವಲಕ್ಕಿ
- 4 - 5 ಒಣ ಮೆಣಸಿನಕಾಯಿ
- 2 ಟೀಸ್ಪೂನ್ ಕೊತ್ತಂಬರಿ ಬೀಜ
- 2 ಟೀಸ್ಪೂನ್ ಜೀರಿಗೆ
- 2 ಟೇಬಲ್ ಚಮಚ ಒಣಕೊಬ್ಬರಿ ಪುಡಿ ಅಥವಾ ತುರಿ
- 2 ಟೀಸ್ಪೂನ್ ಬೆಲ್ಲ
- 1/2 ಟೀಸ್ಪೂನ್ ಹುಣಿಸೆಹಣ್ಣಿನ ಪೇಸ್ಟ್ (ಅಥವಾ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು)
- 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಟೇಬಲ್ ಚಮಚ ಎಣ್ಣೆ
- 1 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಉದ್ದಿನಬೇಳೆ
- 2 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ
- 2 ಟೇಬಲ್ ಚಮಚ ಹುರಿಗಡಲೆ ಅಥವಾ ಕಡಲೆಪಪ್ಪು
- 2 ಟೇಬಲ್ ಚಮಚ ತೆಳ್ಳಗೆ ಹೆಚ್ಚಿದ ಒಣಕೊಬ್ಬರಿ
- 5 - 6 ಕರಿಬೇವಿನ ಎಲೆ
- 2 ದೊಡ್ಡ ಚಿಟಿಕೆ ಅರಿಶಿನ ಪುಡಿ
- 2 ದೊಡ್ಡ ಚಿಟಿಕೆ ಇಂಗು
ಕುಟ್ಟವಲಕ್ಕಿ ಮಾಡುವ ವಿಧಾನ:
- ಮಿಕ್ಸಿ ಜಾರಿನಲ್ಲಿ ಒಣಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಕೊಬ್ಬರಿ ತುರಿ (ಅಥವಾ ಕೊಬ್ಬರಿ ಪುಡಿ) ಮತ್ತು ಉಪ್ಪನ್ನು ಪುಡಿಮಾಡಿಕೊಳ್ಳಿ.
- ಅದಕ್ಕೆ ಅವಲಕ್ಕಿ, ಹುಣಿಸೇಹಣ್ಣು ಮತ್ತು ಬೆಲ್ಲಸೇರಿಸಿ.
- ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಪಕ್ಕಕ್ಕಿಡಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಶೇಂಗಾ ಹಾಕಿ ಒಗ್ಗರಣೆ ಮಾಡಿ.
- ನಂತ್ರ ಹುರಿಗಡಲೆ, ತೆಳ್ಳಗೆ ಹೆಚ್ಚಿದ ಒಣಕೊಬ್ಬರಿ ಮತ್ತು ಕರಿಬೇವಿನ ಎಲೆ ಹಾಕಿ ಹುರಿಯಿರಿ.
- ಕೊನೆಯಲ್ಲಿ ಅರಿಶಿನ ಮತ್ತು ಇಂಗು ಸೇರಿಸಿ.
- ಪುಡಿ ಮಾಡಿದ ಅವಲಕ್ಕಿ ಮತ್ತು ಮಸಾಲೆ ಸೇರಿಸಿ.
- ಸಣ್ಣ ಉರಿಯಲ್ಲಿ ಒಂದು ನಿಮಿಷ ಚೆನ್ನಾಗಿ ಹುರಿಯಿರಿ.
- ಸ್ಟವ್ ಆಫ್ ಮಾಡಿ, ಬಿಸಿ ಆರಿದ ಮೇಲೆ ಡಬ್ಬದಲ್ಲಿ ಹಾಕಿ ಎತ್ತಿಡಿ.
- ಇದನ್ನು ಹಾಗೆಯೂ ತಿನ್ನಬಹುದು ಅಥವಾ ಮೊಸರಿನೊಂದಿಗೂ ತಿನ್ನಬಹುದು. ಅಥವಾ ಬಿಸಿ ನೀರು ಸೇರಿಸಿ, ಹುಳಿಯವಲಕ್ಕಿ ಮಾಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ