No stuffing Aloo paratha recipe in Kannada | ಮಸಾಲೆ ತುಂಬಿಸದೆ ಆಲೂ ಪರೋಟ ಮಾಡುವ ವಿಧಾನ
ಮಸಾಲೆ ತುಂಬಿಸದೆ ಆಲೂ ಪರೋಟ ವಿಡಿಯೋ
ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಗೋಧಿ ಹಿಟ್ಟು
- 2 ದೊಡ್ಡ ಗಾತ್ರದ ಆಲೂಗಡ್ಡೆ
- 1 ಟೀಸ್ಪೂನ್ ತುರಿದ ಶುಂಠಿ
- 1 ಟೀಸ್ಪೂನ್ ತುರಿದ ಬೆಳ್ಳುಳ್ಳಿ
- 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕರಿಬೇವು
- 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
- 1/2 ಟೀಸ್ಪೂನ್ ಗರಂ ಮಸಾಲಾ
- 1/2 ಟೀಸ್ಪೂನ್ ಜೀರಿಗೆ ಪುಡಿ
- ದೊಡ್ಡ ಚಿಟಿಕೆ ಅರಿಶಿನ
- 6 - 8 ಚಮಚ ತುಪ್ಪ ಅಥವಾ ಎಣ್ಣೆ
- 1 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
ಮಸಾಲೆ ತುಂಬಿಸದೆ ಆಲೂ ಪರೋಟ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ. ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹುರಿಯಿರಿ.
- ನಂತ್ರ ಸಣ್ಣಗೆ ಹೆಚ್ಚಿದ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಹುರಿದು ಸ್ಟವ್ ಆಫ್ ಮಾಡಿ.
- ಉಪ್ಪು, ಅಚ್ಚಖಾರದ ಪುಡಿ, ಗರಂ ಮಸಾಲಾ, ಜೀರಿಗೆ ಪುಡಿ ಮತ್ತು ಅರಿಶಿನ ಹಾಕಿ.
- ಬೇಯಿಸಿ, ಸಿಪ್ಪೆ ತೆಗೆದು, ಪುಡಿಮಾಡಿದ ಆಲೂಗಡ್ಡೆ ಸೇರಿಸಿ.
- ಚೆನ್ನಾಗಿ ಚೂರುಗಳಿಲ್ಲದಂತೆ ಹಿಸುಕಿ ಕಲಸಿ.
- ಸುಮಾರು ಒಂದು ಕಪ್ ಗೋಧಿಹಿಟ್ಟು ಸೇರಿಸಿ, ಚೆನ್ನಾಗಿ ಕಲಸಿ. ಆಲೂಗಡ್ಡೆ ಗಾತ್ರದ ಮೇಲೆ ಗೋಧಿಹಿಟ್ಟು ಹೆಚ್ಚು ಕಡಿಮೆ ಆಗಬಹುದು.
- ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟನ್ನು ಕಲಸಿಕೊಳ್ಳಿ.
- ಒಂದು ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಗೋಧಿ ಹಿಟ್ಟು ಮುಟ್ಟಿಸಿಕೊಂಡು ಚಪಾತಿ ಲಟ್ಟಿಸಿ.
- ಬೇಕಾದಲ್ಲಿ ಒಂದು ಪ್ಲೇಟ್ ಅಥವಾ ಬೌಲ್ ತೆಗೆದುಕೊಂಡು ಒಳ್ಳೆಯ ವೃತ್ತಾಕಾರ ಮಾಡಿಕೊಳ್ಳಿ.
- ಒಂದು ಹೆಂಚು ಅಥವಾ ತವಾ ಬಿಸಿ ಮಾಡಿ. ಲಟ್ಟಿಸಿದ ಚಪಾತಿಯನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ತುಪ್ಪ ಅಥವಾ ಎಣ್ಣೆ ಹಾಕಿ.
- ಉಪ್ಪಿನಕಾಯಿ ಅಥವಾ ಮೊಸರು ಅಥವಾ ಯಾವುದೇ ಗೊಜ್ಜಿನೊಂದಿಗೆ ಬಡಿಸಿ. ಹಾಗೆಯೂ ತಿನ್ನಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ