Godhi hittina unde recipe in Kannada | ಗೋಧಿ ಹಿಟ್ಟಿನ ಉಂಡೆ ಮಾಡುವ ವಿಧಾನ
ಗೋಧಿ ಹಿಟ್ಟಿನ ಉಂಡೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಗೋಧಿಹಿಟ್ಟು
- 1/2 ಕಪ್ ನೀರು
- 3/4 ಕಪ್ ಬೆಲ್ಲ
- 3 ಟೀಸ್ಪೂನ್ ತುಪ್ಪ (ಬೇಕಾದಲ್ಲಿ ಜಾಸ್ತಿ ಹಾಕಬಹುದು)
- 2 - 3 ಟೇಬಲ್ ಚಮಚ ಚೂರು ಮಾಡಿದ ಗೋಡಂಬಿ
- ಎರಡು ಏಲಕ್ಕಿ (ಅಥವಾ ದೊಡ್ಡ ಚಿಟಿಕೆ ಏಲಕ್ಕಿ ಪುಡಿ)
ಗೋಧಿ ಹಿಟ್ಟಿನ ಉಂಡೆ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ.
- ಅದಕ್ಕೆ ಗೋಡಂಬಿ ಚೂರುಗಳನ್ನು ಹಾಕಿ ಹುರಿಯಿರಿ.
- ನಂತ್ರ ಅದೇ ಬಾಣಲೆಗೆ ಗೋಧಿ ಹಿಟ್ಟು ಹಾಕಿ.
- ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿ, ಒಳ್ಳೆ ಘಮ ಬರುವವರೆಗೆ ಹುರಿಯಿರಿ.
- ಹುರಿದ ಹಿಟ್ಟು ಮತ್ತು ಗೋಡಂಬಿಯನ್ನು ಒಂದು ಪ್ಲೇಟ್ ನಲ್ಲಿ ತೆಗೆದುಕೊಂಡು, ಏಲಕ್ಕಿ ಪುಡಿ ಸೇರಿಸಿ ಪಕ್ಕಕ್ಕಿಡಿ.
- ಪುನಃ ಅದೇ ಬಾಣಲೆಯಲ್ಲಿ ಪುಡಿಮಾಡಿದ ಬೆಲ್ಲ ಮತ್ತು ನೀರು ತೆಗೆದುಕೊಳ್ಳಿ.
- ಆಗಾಗ್ಯೆ ಮಗುಚುತ್ತಾ ಕುದಿಸಿ.
- ಬೆಲ್ಲ ಕರಗಿ ಚೆನ್ನಾಗಿ ನೊರೆ ಬಂದು ಕುದಿಯಲು ಪ್ರಾರಂಭವಾದಾಗ ಸ್ಟವ್ ಆಫ್ ಮಾಡಿ.
- ಹುರಿದ ಗೋಧಿ ಹಿಟ್ಟಿಗೆ ಸೇರಿಸಿ.
- ಚೆನ್ನಾಗಿ ಕಲಸಿ.
- ಸ್ವಲ್ಪ ಬಿಸಿ ಆರಿದ ಮೇಲೆ ಉಂಡೆ ಮಾಡಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ