Carrot holige or obbatu recipe in Kannada | ಕ್ಯಾರಟ್ ಹೋಳಿಗೆ ಅಥವಾ ಒಬ್ಬಟ್ಟು ಮಾಡುವ ವಿಧಾನ
ಕ್ಯಾರಟ್ ಹೋಳಿಗೆ ವಿಡಿಯೋ
ಕಣಕಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )
- 1 ಕಪ್ ಗೋಧಿ ಹಿಟ್ಟು
- ಉಪ್ಪು ರುಚಿಗೆ ತಕ್ಕಷ್ಟು
- 3 ಟೇಬಲ್ ಚಮಚ ಅಡುಗೆ ಎಣ್ಣೆ
ಹೂರಣಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )
- 1 ಕಪ್ ಕ್ಯಾರಟ್
- 1/4 ಕಪ್ ತೆಂಗಿನ ತುರಿ
- 1/2 ಕಪ್ ಪುಡಿಮಾಡಿದ ಬೆಲ್ಲ
- 1 ಏಲಕ್ಕಿ
ಕ್ಯಾರಟ್ ಹೋಳಿಗೆ ಅಥವಾ ಒಬ್ಬಟ್ಟು ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಉಪ್ಪು ಹಾಕಿ.
- ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾದ ಹಿಟ್ಟನ್ನು ಕಲಸಿ.
- ಮೇಲಿನಿಂದ ಎಣ್ಣೆ ಸುರಿದು, ಮುಚ್ಚಳ ಮುಚ್ಚಿ, 30 ನಿಮಿಷ ಪಕ್ಕಕ್ಕಿಡಿ.
- ಈಗ ಹೂರಣ ತಯಾರಿಸಲು, ಒಂದು ಬಾಣಲೆಯಲ್ಲಿ ಒಂದು ಚಮಚ ತುಪ್ಪ ಬಿಸಿ ಮಾಡಿ.
- ಸಣ್ಣಗೆ ತುರಿದ ಕ್ಯಾರಟ್, ತೆಂಗಿನ ತುರಿ, ಏಲಕ್ಕಿ ಮತ್ತು ಪುಡಿಮಾಡಿದ ಬೆಲ್ಲವನ್ನು ಹಾಕಿ. ಬೇಕಾದಲ್ಲಿ ಕ್ಯಾರಟ್ ಮತ್ತು ತೆಂಗಿನತುರಿಯನ್ನು ಒಂದು ಸುತ್ತು ಅರೆದುಕೊಳ್ಳಬಹುದು.
- ನೀರಿನಂಶ ಹೋಗುವವರೆಗೆ ಮಧ್ಯಮ ಉರಿಯಲ್ಲಿ ಮಗುಚಿ.
- ಹೂರಣ ಬೆಚ್ಚಗಾದ ನಂತರ ಸಣ್ಣ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ. ಉಂಡೆ ಮೃದುವಾಗಿರಬೇಕು.
- ನಂತರ ಕೈಗೆ ಹಿಟ್ಟು ಮುಟ್ಟಿಸಿಕೊಂಡು ಒಂದು ನಿಂಬೆಗಾತ್ರದ ಹಿಟ್ಟು ತೆಗೆದುಕೊಂಡು ಬಟ್ಟಲಿನಾಕಾರ ಮಾಡಿ. ಹೂರಣಇಟ್ಟು, ಜಾಗ್ರತೆಯಿಂದ ಹೂರಣವನ್ನು ಒಳಗೆ ಸೇರಿಸಿ.
- ಬೇಕಾದಷ್ಟು ಹಿಟ್ಟು ಉದುರಿಸಿ, ತೆಳುವಾಗಿ ಲಟ್ಟಿಸಿ.
- ಕಾದ ಹಂಚಿನ ಮೇಲೆ ಹಾಕಿ ಎರಡು ಬದಿ ಕಾಯಿಸಿ.
- ಕಾಯಿಸುವಾಗ ಎರಡು ಬದಿ ಸ್ವಲ್ಪ ತುಪ್ಪ ಹಚ್ಚಿ. ರುಚಿ ರುಚಿಯಾದ ಗೋಧಿ ಹಿಟ್ಟಿನ ಕ್ಯಾರಟ್ ಹೋಳಿಗೆಯನ್ನು ತುಪ್ಪದೊಂದಿಗೆ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ