Small onion gojju recipe in Kannada | ಸಣ್ಣ ಈರುಳ್ಳಿ ಗೊಜ್ಜು ಮಾಡುವ ವಿಧಾನ
ಸಣ್ಣ ಈರುಳ್ಳಿ ಗೊಜ್ಜು ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಸಿಪ್ಪೆ ತೆಗೆದ ಸಣ್ಣ ಈರುಳ್ಳಿ
- 1 ಟೇಬಲ್ ಚಮಚ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
- ಸ್ವಲ್ಪ ಕರಿಬೇವು
- ಸಣ್ಣ ನಿಂಬೆ ಗಾತ್ರದ ಹುಣಿಸೇಹಣ್ಣು
- 2 ಟೀಸ್ಪೂನ್ ಬೆಲ್ಲ
- 2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ತೆಂಗಿನತುರಿ
- 2 ಒಣಮೆಣಸು
- 1 ಟೀಸ್ಪೂನ್ ಕೊತ್ತಂಬರಿ
- 1 ಚಮಚ ಎಣ್ಣೆ
ಸಣ್ಣ ಈರುಳ್ಳಿ ಗೊಜ್ಜು ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಒಣಮೆಣಸು ಮತ್ತು ಕೊತ್ತಂಬರಿಯನ್ನು ಒಂದು ಚಮಚ ಎಣ್ಣೆಯಲ್ಲಿ ಹುರಿದುಕೊಳ್ಳಿ.
- ಅದಕ್ಕೆ ಅರ್ಧ ಕಪ್ ತೆಂಗಿನತುರಿ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆದಿಟ್ಟುಕೊಳ್ಳಿ.
- ನಂತ್ರ ಅದೇ ಬಾಣಲೆಯಲ್ಲಿ ಒಂದು ಟೇಬಲ್ ಚಮಚ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ಅದಕ್ಕೆ ಸಿಪ್ಪೆ ತೆಗೆದ ಸಣ್ಣ ಈರುಳ್ಳಿ ಹಾಕಿ ಎರಡು ನಿಮಿಷ ಚೆನ್ನಾಗಿ ಹುರಿಯಿರಿ.
- ಆಮೇಲೆ ಉಪ್ಪು ಮತ್ತು ಹುಣಿಸೆರಸ ಸೇರಿಸಿ. ಚೆನ್ನಾಗಿ ಕಲಸಿ. ಮುಚ್ಚಳ ಮುಚ್ಚಿ ಬೇಯಿಸಿ.
- ಆಮೇಲೆ ಅರೆದ ಮಸಾಲೆ ಸೇರಿಸಿ.
- ಸ್ವಲ್ಪ ಬೆಲ್ಲ ಸೇರಿಸಿ. ಉಪ್ಪು ಮತ್ತು ಹುಳಿ ಹೊಂದಿಸಿಕೊಳ್ಳಿ. ಅಗತ್ಯವಿದ್ದಷ್ಟು ನೀರು ಸೇರಿಸಿ.
- ಚೆನ್ನಾಗಿ ಕುದಿಸಿ, ಸ್ಟವ್ ಆಫ್ ಮಾಡಿ. ಅನ್ನ ಅಥವಾ ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ