Rave modaka recipe in Kannada | ರವೇ ಮೋದಕ ಮಾಡುವ ವಿಧಾನ
ರವೇ ಮೋದಕ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಸಣ್ಣ ರವೇ
- 1/2 ಕಪ್ ತೆಂಗಿನ ತುರಿ
- 1/4 ಕಪ್ ಬೆಲ್ಲ
- 1/2 ಕಪ್ ನೀರು
- 1/2 ಕಪ್ ಹಾಲು
- 2 ಏಲಕ್ಕಿ
- 1 ಟೀಸ್ಪೂನ್ ತುಪ್ಪ
- 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
ರವೇ ಮೋದಕ ಮಾಡುವ ವಿಧಾನ :
- ಒಂದು ಬಾಣಲೆಯಲ್ಲಿ ನೀರು ಮತ್ತು ಹಾಲನ್ನು ಕುದಿಯಲು ಇಡಿ.
- 1/2 ಟೀಸ್ಪೂನ್ ತುಪ್ಪ ಮತ್ತು 1/2 ಟೀಸ್ಪೂನ್ ಉಪ್ಪು ಹಾಕಿ.
- ನೀರು ಕುದಿಯಲು ಪ್ರಾರಂಭಿಸಿದ ನಂತರ ರವೆಯನ್ನು ಹಾಕಿ.
- 2 - 3 ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಮಗುಚಿ ಬೇಯಿಸಿ. ಪಕ್ಕಕ್ಕಿಡಿ.
- ನಂತರ ಒಂದು ಬಾಣಲೆಯಲ್ಲಿ ತೆಂಗಿನ ತುರಿ, ಪುಡಿಮಾಡಿದ ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ತೆಗೆದುಕೊಳ್ಳಿ.
- ಮಗುಚಿ ಹೂರಣ ಸಿದ್ಧ ಮಾಡಿಕೊಳ್ಳಿ. ಜಾಸ್ತಿ ಒಣಗಿಸ ಬೇಡಿ.
- ಆಮೇಲೆ ಬೇಯಿಸಿದ ರವೇಯನ್ನು ಚೆನ್ನಾಗಿ ನಾದಿ.
- ಸಣ್ಣ ಲಿಂಬೆ ಗಾತ್ರದ ಹಿಟ್ಟು ತೆಗೆದು ಕೊಂಡು ಬಟ್ಟಲಿನಂತೆ ಅಗಲ ಮಾಡಿ.
- ಮಧ್ಯದಲ್ಲಿ ಹೂರಣ ಇಟ್ಟು, ಅಂಚುಗಳನ್ನು ಒಟ್ಟಿಗೆ ಸೇರಿಸಿ, ಮೋದಕದ ಆಕಾರ ಮಾಡಿ.
- ಇದನ್ನು ಸೆಕೆಯಲ್ಲಿ (ಆವಿಯಲ್ಲಿ) ಬೇಯಿಸಬೇಕಾಗಿಲ್ಲ. ನಿಮಗಿಷ್ಟ ಇದ್ದಲ್ಲಿ ಒಂದೈದು ನಿಮಿಷ ಬೇಯಿಸಿದರೆ ಸಮಸ್ಯೆ ಇಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ