Tomlette recipe in Kannada | ಟಾಮ್ಲೆಟ್ ಮಾಡುವ ವಿಧಾನ
ಟಾಮ್ಲೆಟ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/4 ಕಪ್ ಕಡ್ಲೆಹಿಟ್ಟು
- 2 ಟೇಬಲ್ ಚಮಚ ಅಕ್ಕಿಹಿಟ್ಟು
- ಚಿಟಿಕೆ ಓಮ
- ಚಿಟಿಕೆ ಜೀರಿಗೆ
- 1/4 ಟೀಸ್ಪೂನ್ ಅಚ್ಚಖಾರದ ಪುಡಿ
- 1/4 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
- 2 ಟೇಬಲ್ ಚಮಚ ಈರುಳ್ಳಿ
- ಹಸಿರುಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು (ನಿಮ್ಮ ಖಾರಕ್ಕೆ ತಕ್ಕಂತೆ)
- 1 ಟೇಬಲ್ ಚಮಚ ದೊಣ್ಣೆಮೆಣಸು
- 1/2 ಟೊಮೇಟೊ ಸಣ್ಣಗೆ ಹೆಚ್ಚಿದ್ದು
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- ಎಣ್ಣೆ ಕಾಯಿಸಲು
ಟಾಮ್ಲೆಟ್ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು ಮತ್ತು ಅಕ್ಕಿ ಹಿಟ್ಟು ತೆಗೆದುಕೊಳ್ಳಿ.
- ಅದಕ್ಕೆ ಓಮ, ಜೀರಿಗೆ, ಅಚ್ಚಖಾರದ ಪುಡಿ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಕಲಸಿ.
- ಆಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ದೊಣ್ಣೆಮೆಣಸು, ಟೊಮೇಟೊ, ಕೊತ್ತಂಬರಿ ಸೊಪ್ಪು ಮತ್ತು ಹಸಿರುಮೆಣಸು ಸೇರಿಸಿ.
- ಸ್ವಲ್ಪ ನೀರು ಸೇರಿಸಿ. ಮಿಲ್ಕ್ ಶೇಕ್ ನ ಹದಕ್ಕೆ ಹಿಟ್ಟನ್ನು ಕಲಸಿಕೊಳ್ಳಿ.
- ತವಾ ಬಿಸಿ ಮಾಡಿ. ಕಲಸಿದ ಹಿಟ್ಟನ್ನು ಸುರಿದು, ದೋಸೆಯಂತೆ ಹರಡಿ.
- ಎರಡು ಬದಿ ಎಣ್ಣೆ ಹಾಕಿ ಕಾಯಿಸಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ