Southekayi rotti recipe in Kannada | ಸೌತೆಕಾಯಿ ರೊಟ್ಟಿ ಮಾಡುವ ವಿಧಾನ
ಸೌತೆಕಾಯಿ ರೊಟ್ಟಿ ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
- 1 ಕಪ್ ತುರಿದ ಸೌತೆಕಾಯಿ
- 1/2 ಕಪ್ ರವೆ
- 1/4 ಕಪ್ ತೆಂಗಿನತುರಿ
- 1 - 2 ಹಸಿಮೆಣಸಿನಕಾಯಿ
- 1 ಚಮಚ ಸಕ್ಕರೆ (ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿ)
- ಒಂದು ಸಣ್ಣ ಹಿಡಿ ಕೊತ್ತಂಬರಿ ಸೊಪ್ಪು
- ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
- ಉಪ್ಪು ರುಚಿಗೆ ತಕ್ಕಷ್ಟು.
ಸೌತೆಕಾಯಿ ರೊಟ್ಟಿ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ರವೆ ಮತ್ತು ತುರಿದ ಸೌತೆಕಾಯಿ ತೆಗೆದುಕೊಳ್ಳಿ.
- ಅದಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ತೆಂಗಿನತುರಿ ಸೇರಿಸಿ.
- ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ.
- ರುಚಿಗೆ ತಕ್ಕಂತೆ ಉಪ್ಪು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ.
- ಚೆನ್ನಾಗಿ ಕಲಸಿ. ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಸೇರಿಸಿ ಮೆತ್ತಗಿನ ರೊಟ್ಟಿ ಹಿಟ್ಟನ್ನು ಕಲಸಿ
- ಹತ್ತು ನಿಮಿಷ ನೆನೆಯಲು ಬಿಡಿ.
- ಆಮೇಲೆ ತವ ಬಿಸಿಮಾಡಿ. ಎಣ್ಣೆ ಹಚ್ಚಿ, ನಿಂಬೆ ಗಾತ್ರದ ಹಿಟ್ಟು ಹಾಕಿ, ತವ ಮೇಲೆ ತಟ್ಟಿ. ಬೇಕಾದಲ್ಲಿ ಕೈ ಬೆರಳುಗಳಿಗೆ ನೀರು ಮುಟ್ಟಿಸಿಕೊಂಡು ಸಣ್ಣ ಗಾತ್ರದ ರೊಟ್ಟಿ ಮಾಡಿ. ರೊಟ್ಟಿ ತಟ್ಟುವಾಗ ಉರಿ ಕಡಿಮೆ ಇರಲಿ.
- ಉರಿ ಜಾಸ್ತಿ ಮಾಡಿ, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ ಬೇಯಿಸಿ. ಇನ್ನೊಂದು ಬದಿಯೂ ಕಾಯಿಸಿ.
- ತೆಂಗಿನಕಾಯಿ ಚಟ್ನಿ ಮತ್ತು ತುಪ್ಪದೊಂದಿಗೆ ಬಡಿಸಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ