Sabbakki halwa recipe in Kannada | ಸಬ್ಬಕ್ಕಿ ಹಲ್ವಾ ಮಾಡುವ ವಿಧಾನ
ಸಬ್ಬಕ್ಕಿ ಹಲ್ವಾ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಸಬ್ಬಕ್ಕಿ
- 1/2 ಕಪ್ ಸಕ್ಕರೆ
- ಸಣ್ಣ ಚಿಟಿಕೆ ಹಳದಿ ಬಣ್ಣ ಅಥವಾ ಅರಿಶಿನ
- 2 - 3 ಟೇಬಲ್ ಚಮಚ ತುಪ್ಪ
- 1 ಲೋಟ ನೀರು
- 2 ಟೇಬಲ್ ಚಮಚ ಅಥವಾ (2 ಟೇಬಲ್ ಚಮಚ ಹಾಲು + 2 ಟೇಬಲ್ ಚಮಚ ಹಾಲಿನಪುಡಿ)
- 2 ಟೇಬಲ್ ಚಮಚ ಗೋಡಂಬಿ
- 1 ಟೇಬಲ್ ಚಮಚ ಒಣದ್ರಾಕ್ಷಿ
ಸಬ್ಬಕ್ಕಿ ಹಲ್ವಾ ಮಾಡುವ ವಿಧಾನ:
- ಒಂದು ಕುಕ್ಕರ್ ನಲ್ಲಿ ಸಬ್ಬಕ್ಕಿ ತೆಗೆದುಕೊಂಡು ತೊಳೆಯಿರಿ.
- ಆಮೇಲೆ ಒಂದು ಕಪ್ ನೀರು ಹಾಕಿ ಎರಡು ವಿಷಲ್ ಮಾಡಿ ಬೇಯಿಸಿಕೊಳ್ಳಿ.
- ಆ ಸಮಯದಲ್ಲಿ ಒಂದು ಸಣ್ಣ ಬಾಣಲೆಯಲ್ಲಿ ದ್ರಾಕ್ಷಿ ಮತ್ತು ಗೋಡಂಬಿ ಹುರಿದಿಟ್ಟುಕೊಳ್ಳಿ.
- ಖೋವಾ ಇಲ್ಲದಿದ್ದಲ್ಲಿ, ಹಾಲನ್ನು ಸ್ವಲ್ಪ ಬಿಸಿಮಾಡಿ, ಹಾಲಿನಪುಡಿಯನ್ನು ಕಲಸಿಟ್ಟುಕೊಳ್ಳಿ.
- ಬೇಯಿಸಿದ ಸಬ್ಬಕ್ಕಿಯನ್ನು, ಒಂದು ಬಾಣಲೆಯಲ್ಲಿ ತೆಗೆದುಕೊಂಡು, ಸಕ್ಕರೆ ಸೇರಿಸಿ ಮಗುಚಿ. ಒಂದೆರಡು ನಿಮಿಷ ಮಗುಚಿದರೆ ಸಾಕು.
- ನಂತರ ಬಣ್ಣ ಮತ್ತು ಒಂದು ಟೇಬಲ್ ಚಮಚ ತುಪ್ಪ ಸೇರಿಸಿ ಮಗುಚಿ.
- ಆಮೇಲೆ ಖೋವಾ ಅಥವಾ ಹಾಲಿನಪುಡಿಯ ಮಿಶ್ರಣ ಸೇರಿಸಿ, ಮಗುಚಿ.
- ಕೊನೆಯಲ್ಲಿ ಉಳಿದ ತುಪ್ಪ ಮತ್ತು ಹುರಿದ ದ್ರಾಕ್ಷಿ-ಗೋಡಂಬಿ ಹಾಕಿ ಮಗುಚಿ.
- ಜಾಸ್ತಿ ಹೊತ್ತು ಮಗುಚುವ ಅವಶ್ಯಕತೆ ಇಲ್ಲ.
- ಹಲ್ವಾ ತಳ ಬಿಡಲು ಪ್ರಾರಂಭವಾದಾಗ, ಅಥವಾ ಹಲ್ವಾ ದಪ್ಪ ಪೇಸ್ಟ್ ನಂತಾದಾಗ ಸ್ಟವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ ಹಲ್ವಾ ಸ್ವಲ್ಪ ಗಟ್ಟಿ ಆಗುವುದು. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ