Pongal mix recipe in Kannada | ಪೊಂಗಲ್ ಮಿಕ್ಸ್ ಮಾಡುವ ವಿಧಾನ
ಪೊಂಗಲ್ ಮಿಕ್ಸ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿ
- 3/4 ಕಪ್ ಹೆಸರುಬೇಳೆ
- 2 ಟೇಬಲ್ ಸ್ಪೂನ್ ತುಪ್ಪ ಅಥವಾ ಎಣ್ಣೆ
- 1 ಟೀ ಸ್ಪೂನ್ ಸಾಸಿವೆ
- 1 ಟೀ ಸ್ಪೂನ್ ಜೀರಿಗೆ
- 1 ಟೀ ಸ್ಪೂನ್ ಜಜ್ಜಿದ ಕಾಳುಮೆಣಸು
- 2 ಟೇಬಲ್ ಚಮಚ ಗೋಡಂಬಿ
- 3 - 5 ಹಸಿರುಮೆಣಸಿನಕಾಯಿ
- 1 ಇಂಚು ಉದ್ದದ ಶುಂಠಿ ಸಣ್ಣಗೆ ಕತ್ತರಿಸಿದ್ದು
- 10 - 15 ಕರಿಬೇವಿನ ಎಲೆ
- 1/4 ಟೀ ಸ್ಪೂನ್ ಅರಶಿನ ಪುಡಿ
- 2 ದೊಡ್ಡ ಚಿಟಿಕೆ ಇಂಗು
- 1/4 ಕಪ್ ತೆಂಗಿನತುರಿ
- ಉಪ್ಪು ರುಚಿಗೆ ತಕ್ಕಷ್ಟು
ಪೊಂಗಲ್ ಮಿಕ್ಸ್ ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು, ನೀರು ಸಂಪೂರ್ಣ ಬಗ್ಗಿಸಿ, ಹರಡಿ, ನೀರಾರಲು ಬಿಡಿ. ತೊಳೆಯದೆಯೂ ಮಾಡಬಹುದು. ಸುಮಾರು ಒಂದು ಘಂಟೆ ಒಣಗಿಸಿದರೆ ಸಾಕಾಗುತ್ತದೆ.
- ಹೆಸರು ಬೇಳೆಯನ್ನು ತೊಳೆದು, ನೀರು ಸಂಪೂರ್ಣ ಬಗ್ಗಿಸಿ, ಹರಡಿ, ನೀರಾರಲು ಬಿಡಿ. ತೊಳೆಯದೆಯೂ ಮಾಡಬಹುದು. ಸುಮಾರು ಒಂದು ಘಂಟೆ ಒಣಗಿಸಿದರೆ ಸಾಕಾಗುತ್ತದೆ.
- ಒಂದು ಬಾಣಲೆಯಲ್ಲಿ ಒಣಗಿದ ಹೆಸರು ಬೇಳೆ ಹಾಕಿ ಘಮ್ಮೆಂದು ಸುವಾಸನೆ ಬರುವವರೆಗೆ ಹುರಿದು ಪಕ್ಕಕ್ಕಿಡಿ.
- ನಂತರ ಒಣಗಿದ ಅಕ್ಕಿ ಹಾಕಿ ಸ್ವಲ್ಪ ಬಿಳಿ ಬಣ್ಣ ಬರುವವರೆಗೆ ಹುರಿದು ಪಕ್ಕಕ್ಕಿಡಿ. ನೆನಪಿಡಿ, ಕೆಲವು ನಿಮಿಷಗಳ ಕಾಲ ಹುರಿದರೆ ಸಾಕಾಗುವುದು.
- ನಂತರ ಒಂದು ಬಾಣಲೆಯನ್ನು ಬಿಸಿಮಾಡಿ, ತುಪ್ಪ (ಅಥವಾ ಎಣ್ಣೆ), ಸಾಸಿವೆ ಮತ್ತು ಜೀರಿಗೆ ಹಾಕಿ.
- ಸಾಸಿವೆ ಸಿಡಿದ ಕೂಡಲೇ ಗೋಡಂಬಿ ಮತ್ತು ಕಾಳುಮೆಣಸು ಸೇರಿಸಿ ಹುರಿಯಿರಿ.
- ನಂತರ ಶುಂಠಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ.
- ಕೊನೆಯಲ್ಲಿ ಅರಶಿನ ಪುಡಿ ಮತ್ತು ಇಂಗು ಹಾಕಿ.
- ತೆಂಗಿನ ತುರಿಯನ್ನು ಸೇರಿಸಿ ಚೆನ್ನಾಗಿ ಮಗುಚಿ.
- ಹುರಿದ ಅಕ್ಕಿ ಮತ್ತು ಬೇಳೆ ಸೇರಿಸಿ, ಒಂದೆರಡು ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.
- ಸ್ಟವ್ ಆಫ್ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ (ಎರಡು ದೊಡ್ಡ ಚಮಚ) ಚೆನ್ನಾಗಿ ಮಗುಚಿ. ಬಿಸಿ ಆರಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ.
- ಪೊಂಗಲ್ ಮಾಡಲು ಕುಕ್ಕರ್‌ನಲ್ಲಿ ಒಂದು ಅಳತೆ ಪೊಂಗಲ್ ಮಿಕ್ಸ್ ಮತ್ತು ನಾಲ್ಕು ಅಳತೆ ನೀರು ಹಾಕಿ 2 ವಿಷಲ್ ಮಾಡಿ ಮೆತ್ತಗೆ ಬೇಯಿಸಿ. ಮೇಲಿನಿಂದ ಸ್ವಲ್ಪ ತುಪ್ಪ ಹಾಕಿ, ಮಗುಚಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ