Rava bread toast recipe in Kannada | ರವೇ ಬ್ರೆಡ್ ಟೋಸ್ಟ್ ಮಾಡುವ ವಿಧಾನ
ರವೇ ಟೋಸ್ಟ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 6- 8 ಬ್ರೆಡ್ ಸ್ಲೈಸ್
- 1/4 ಕಪ್ ಮೊಸರು
- 1/4 ಕಪ್ ನೀರು
- 2 ಟೇಬಲ್ ಚಮಚ ಈರುಳ್ಳಿ
- 2 ಟೇಬಲ್ ಚಮಚ ದೊಣ್ಣೆಮೆಣಸು
- 2 ಟೇಬಲ್ ಚಮಚ ಟೊಮೇಟೊ
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಹಸಿರುಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು (ನಿಮ್ಮ ಖಾರಕ್ಕೆ ತಕ್ಕಂತೆ)
- ಸ್ವಲ್ಪ ಶುಂಠಿ ಅಥವಾ ಇಂಗು (ಬೇಕಾದಲ್ಲಿ)
- ಉಪ್ಪು ರುಚಿಗೆ ತಕ್ಕಷ್ಟು.
ರವೇ ಬ್ರೆಡ್ ಟೋಸ್ಟ್ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ರವೇ ತೆಗೆದುಕೊಂಡು, ಮೊಸರು ಮತ್ತು ನೀರು ಹಾಕಿ.
- ಆಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ದೊಣ್ಣೆಮೆಣಸು, ಟೊಮೇಟೊ, ಕೊತ್ತಂಬರಿ ಸೊಪ್ಪು ಮತ್ತು ಹಸಿರುಮೆಣಸು ಸೇರಿಸಿ. ಬೇಕಾದಲ್ಲಿ ಶುಂಠಿ ಮತ್ತು ಇಂಗು ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಚೆನ್ನಾಗಿ ಕಲಸಿ, ಬ್ರೆಡ್ ಮೇಲೆ ತೆಳುವಾಗಿ ಹರಡಿ.
- ತವಾ ಬಿಸಿ ಮಾಡಿ. ಸ್ವಲ್ಪ ಬೆಣ್ಣೆ ಬಿಸಿ ಮಾಡಿ, ಮೊದಲಿಗೆ ರವ ಮಿಶ್ರಣ ಹಚ್ಚಿದ ಬದಿ ಕಾಯಿಸಿ.
- ಇನ್ನೊಂದು ಬದಿಗೆ ಬೆಣ್ಣೆ ಹಚ್ಚಿ, ಎರಡು ಬದಿ ಕಂದು ಬಣ್ಣ ಮತ್ತು ಗರಿಗರಿಯಾಗುವವರೆಗೆ ಕಾಯಿಸಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ