Jeera rice recipe in Kannada | ಜೀರಾ ರೈಸ್ ಮಾಡುವ ವಿಧಾನ
ಜೀರಾ ರೈಸ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಬಾಸಮತಿ ಅಕ್ಕಿ
- 2 ಟೇಬಲ್ ಚಮಚ ತುಪ್ಪ
- 2 ಚಮಚ ಜೀರಿಗೆ
- 1 ಸಣ್ಣ ಪುಲಾವ್ ಎಲೆ
- 1 ಏಲಕ್ಕಿ
- 1/2 ಬೆರಳುದ್ದ ಚಕ್ಕೆ
- 5 - 6 ಲವಂಗ
- 1-2 ಹಸಿರುಮೆಣಸಿನಕಾಯಿ
- 1/2 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಶುಂಠಿ
- 4 ಕಪ್ ನೀರು
- ಉಪ್ಪು ರುಚಿಗೆ ತಕ್ಕಷ್ಟು
ಅಲಂಕಾರಕ್ಕೆ ಬೇಕಾಗುವ ಪದಾರ್ಥಗಳು:
- 5 ಗೋಡಂಬಿ
- 1/4 ಈರುಳ್ಳಿ ಉದ್ದವಾಗಿ ಸೀಳಿದ್ದು
ಜೀರಾ ರೈಸ್ ಮಾಡುವ ವಿಧಾನ:
- ಅಕ್ಕಿ ತೊಳೆದು, ನೀರು ಬಗ್ಗಿಸಿ, 20 ನಿಮಿಷ ನೆನೆಸಿಡಿ.
- ಕುಕ್ಕರ್ ನಲ್ಲಿ ತುಪ್ಪ ತೆಗೆದುಕೊಂಡು ಬಿಸಿ ಮಾಡಿ. ಅದಕ್ಕೆ ಜೀರಿಗೆ ಹಾಕಿ.
- ಕೂಡಲೇ ಪುಲಾವ್ ಎಲೆ, ಏಲಕ್ಕಿ, ಚಕ್ಕೆ ಮತ್ತು ಲವಂಗ ಸೇರಿಸಿ.
- ಜೊತೆಯಲ್ಲಿ ಸಣ್ಣದಾಗಿ ಕತ್ತರಿಸಿದ ಶುಂಠಿ (ಬೇಕಾದಲ್ಲಿ) ಮತ್ತು ಸೀಳಿದ ಹಸಿಮೆಣಸನ್ನು ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
- ನಂತರ ತೊಳೆದಿಟ್ಟ ಅಕ್ಕಿ ಹಾಕಿ 10 - 15 ಸೆಕೆಂಡ್ ಕಾಲ ಹುರಿಯಿರಿ.
- ನೀರು ಹಾಕಿ ಮಗುಚಿ.
- ಉಪ್ಪು ಸೇರಿಸಿ ಪುನಃ ಮಗುಚಿ.
- ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 1 ವಿಷಲ್ ಮಾಡಿ.
- ಒತ್ತಡ ಇಳಿದ ಕೂಡಲೇ ಒಂದು ಫೋರ್ಕ್ ಅಥವಾ ಸಟ್ಟುಗ ತೆಗೆದುಕೊಂಡು ಮುದ್ದೆಯಾಗದಂತೆ ಬಿಡಿಸಿ ಅಥವಾ ಹರಡಿ. ಟೊಮೆಟೊ ಸಾಸ್, ಕೂರ್ಮ, ರಾಯಿತ ಅಥವಾ ಉಪ್ಪಿನಕಾಯಿ ಜೊತೆ ಬಡಿಸಿ.
- ಅಲಂಕಾರಕ್ಕೆ ಗೋಡಂಬಿ ಮತ್ತು ಈರುಳ್ಳಿ ಹುರಿದು, ಬಡಿಸುವ ಮೊದಲು ಹಾಕಿ ಕೊಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ