Molake kalu gravy recipe in Kannada | ಮೊಳಕೆಕಾಳು ಗಸಿ ಮಾಡುವ ವಿಧಾನ
ಮೊಳಕೆಕಾಳು ಗಸಿ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)
- 2 ಕಪ್ ಮೊಳಕೆ ಕಟ್ಟಿದ ಕಾಳುಗಳು
- 1 ಸಣ್ಣ ಆಲೂಗಡ್ಡೆ
- 1/2 ಕತ್ತರಿಸಿದ ಈರುಳ್ಳಿ
- 1/2 ಕತ್ತರಿಸಿದ ಟೊಮೆಟೊ
- ದೊಡ್ಡ ಚಿಟಿಕೆ ಅರಿಶಿನ
- 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
- ನಿಮ್ಮ ರುಚಿ ಪ್ರಕಾರ ಉಪ್ಪು
ಮಸಾಲೆ ಅರೆಯಲು ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)
- 1/2 ಕಪ್ ತೆಂಗಿನ ತುರಿ
- 1/2 ಕತ್ತರಿಸಿದ ಈರುಳ್ಳಿ
- 1/2 ಕತ್ತರಿಸಿದ ಟೊಮೆಟೊ
- 2 - 4 ಒಣಮೆಣಸಿನಕಾಯಿ
- 2 ಟೀಸ್ಪೂನ್ ಕೊತ್ತಂಬರಿ ಬೀಜ
- 1 ಟೀಸ್ಪೂನ್ ಜೀರಿಗೆ
- 4 ಬೇಳೆ ಬೆಳ್ಳುಳ್ಳಿ
- ಸ್ವಲ್ಪ ಶುಂಠಿ
- ಸ್ವಲ್ಪ ಚಕ್ಕೆ
- ಸ್ವಲ್ಪ ಲವಂಗ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಕೆಂಪು ಮೆಣಸಿನಕಾಯಿ
- 5 - 6 ಕರಿಬೇವಿನ ಎಲೆ
- 1/2 ಚಮಚ ಸಾಸಿವೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಮೊಳಕೆಕಾಳು ಗಸಿ ಮಾಡುವ ವಿಧಾನ:
- ಒಂದು ಕಪ್ ಬೆರಕೆ ಕಾಳನ್ನು ನೆನೆಸಿ, ಮೊಳಕೆ ಕಟ್ಟಿಸಿಕೊಳ್ಳಿ. ಆಗ ಎರಡು ಕಪ್ ಆಗುವುದು.
- ಮೊಳಕೆ, ಕತ್ತರಿಸಿದ ಆಲೂಗಡ್ಡೆ, 1/2 ಈರುಳ್ಳಿ ಮತ್ತು 1/2 ಟೊಮೇಟೊ ಕುಕ್ಕರ್ ನಲ್ಲಿ ತೆಗೆದುಕೊಳ್ಳಿ.
- ಅದಕ್ಕೆ ಉಪ್ಪು ಅರಿಶಿನ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ, ಎರಡು ವಿಷಲ್ ಮಾಡಿ ಮೆತ್ತಗೆ ಬೇಯಿಸಿಕೊಳ್ಳಿ.
- ಮಸಾಲೆ ಅರೆಯಲು ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣನೆ ಅರೆದಿಟ್ಟುಕೊಳ್ಳಿ.
- ಬೇಯಿಸಿದ ಕಾಳು ಮತ್ತು ತರಕಾರಿಗೆ, ಅರೆದ ಮಸಾಲೆ ಸೇರಿಸಿ.
- ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ, ಕುದಿಸಿ.
- ಒಂದೈದು ನಿಮಷ ಸಣ್ಣ ಉರಿಯಲ್ಲಿ, ಅಥವಾ ಹಸಿವಾಸನೆ ಹೋಗುವವರೆಗೆ ಕುದಿಸಿ.
- ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ. ಸ್ಟವ್ ಆಫ್ ಮಾಡಿ.
- ಎಣ್ಣೆ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ.
- ಅನ್ನ, ಚಪಾತಿ, ರೊಟ್ಟಿ ಅಥವಾ ರಾಗಿ ಮುದ್ದೆಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ