Vanilla mug cake recipe in Kannada | ವೆನಿಲ್ಲಾ ಮಗ್ ಕೇಕ್ ಮಾಡುವ ವಿಧಾನ
ವೆನಿಲ್ಲಾ ಮಗ್ ಕೇಕ್ ವಿಡಿಯೋ
ಬೇಕಾಗುವ ಪದಾರ್ಥಗಳು: (1 ಟೇಬಲ್ ಚಮಚ = 15ಎಂಎಲ್ )
- 4 ಟೇಬಲ್ ಚಮಚ ಮೈದಾ ಹಿಟ್ಟು
- 3 ಟೇಬಲ್ ಚಮಚ ಸಕ್ಕರೆ
- 1/4 ಟೀಸ್ಪೂನ್ ಬೇಕಿಂಗ್ ಪೌಡರ್
- 3 ಟೇಬಲ್ ಚಮಚ ಹಾಲು
- 2 ಟೇಬಲ್ ಕರಗಿಸಿದ ಚಮಚ ಬೆಣ್ಣೆ
- 1/4 ಟೀಸ್ಪೂನ್ ವೆನಿಲ್ಲಾ ಎಸೆನ್ಸ್ (ನಿಮ್ಮಿಷ್ಟದ ಯಾವುದೇ ಎಸೆನ್ಸ್ ಬಳಸಬಹುದು)
ವೆನಿಲ್ಲಾ ಮಗ್ ಕೇಕ್ ಮಾಡುವ ವಿಧಾನ:
- ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಸಕ್ಕರೆ ಮತ್ತು ಬೇಕಿಂಗ್ ಪೌಡರ್ ತೆಗೆದುಕೊಳ್ಳಿ.
- ಅದಕ್ಕೆ ಹಾಲು, ಕರಗಿಸಿದ ಬೆಣ್ಣೆ ಮತ್ತು ವೆನಿಲ್ಲಾ ಎಸೆನ್ಸ್ ಹಾಕಿ ಕಲಸಿ.
- ವಿಸ್ಕ್ ಅಥವಾ ಫೋರ್ಕ್ ಸಹಾಯದಿಂದ ಚೆನ್ನಾಗಿ ಮಿಶ್ರ ಮಾಡಿ.
- ಅದನ್ನು ಬೆಣ್ಣೆ ಸವರಿದ ಮಗ್ ಗೆ ಹಾಕಿ ಮೈಕ್ರೋವೇವ್ ಓವೆನ್ ನಲ್ಲಿ ಒಂದು ನಿಮಿಷ ಹೈ ಪವರ್ (700w) ನಲ್ಲಿ ಬೇಯಿಸಿ. ಓವೆನ್ ನಿಂದ ಓವೆನ್ ಗೆ ಸಮಯ ಬದಲಾಗಬಹುದು.
- ಒಂದು ಕಡ್ಡಿ ಅಥವಾ ಫೋರ್ಕ್ ನ್ನು ಚುಚ್ಚಿ ಕೇಕ್ ಸಂಪೂರ್ಣ ಬೆಂದಿದೆಯೆಂದು ಖಾತ್ರಿ ಪಡಿಸಿಕೊಳ್ಳಿ. ಚುಚ್ಚಿದ ಕಡ್ಡಿಗೆ ಹಸಿ ಹಿಟ್ಟು ಅಂಟಿರಬಾರದು.
- ಬೇಯಿಸಿದ ಕೇಕ್ ಸ್ವಲ್ಪ ಬಿಸಿ ಆರುವವರೆಗೆ ಕಾಯಿರಿ. ನಂತರ ನಿಮ್ಮಿಷ್ಟದಂತೆ ಅಲಂಕಾರ ಮಾಡಿ ಕೂಡಲೇ ತಿನ್ನಲು ಕೊಡಿ.
- ಈ ಕೇಕ್ ನ್ನು ಸ್ವಲ್ಪ ಹೊತ್ತು ಬಿಟ್ಟು ತಿನ್ನುತ್ತೀರಾದರೆ, ಕೇಕ್ ನ್ನು ಮಗ್ ನಿಂದ ತೆಗೆದು, ಕೇಕ್ ನ ಸುತ್ತಲೂ ಸಕ್ಕರೆ ನೀರನ್ನು ಹಚ್ಚಿ.(ಸಕ್ಕರೆ ನೀರು ಮಾಡಲು, 1 ಚಮಚ ಸಕ್ಕರೆ ಯನ್ನು 2 ಚಮಚ ನೀರಿನಲ್ಲಿ ಕರಗಿಸಿ). ಇಲ್ಲವಾದಲ್ಲಿ ಕೇಕ್ ಸ್ವಲ್ಪ ಗಟ್ಟಿ ಎನಿಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ