Bendekai gojju recipe in Kannada | ಬೆಂಡೆಕಾಯಿ ಗೊಜ್ಜು ಮಾಡುವ ವಿಧಾನ
ಬೆಂಡೆಕಾಯಿ ಗೊಜ್ಜು ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 kg ಬೆಂಡೆಕಾಯಿ
- 1 ಕತ್ತರಿಸಿದ ಈರುಳ್ಳಿ
- 1/2 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ
- 1/2 ಟೀಸ್ಪೂನ್ ಗರಂ ಮಸಾಲಾ
- 1 ಟೀಸ್ಪೂನ್ ಕೊತ್ತಂಬರಿ ಅಥವಾ ಧನಿಯಾ ಪುಡಿ
- 1/4 ಟೀಸ್ಪೂನ್ ಅರಿಶಿನ ಪುಡಿ
- 2 ಟೇಬಲ್ ಚಮಚ ಮೊಸರು
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಟೇಬಲ್ ಚಮಚ ಕಸೂರಿ ಮೇಥಿ ಅಥವಾ ಒಣಗಿದ ಮೆಂತೆ ಸೊಪ್ಪು (ಬೇಕಾದಲ್ಲಿ)
- 1 ಟೇಬಲ್ ಚಮಚ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಅರೆಯಲು ಬೇಕಾಗುವ ಪದಾರ್ಥಗಳು:
- 2 ಕತ್ತರಿಸಿದ ಟೊಮೇಟೊ
- 2 - 4 ಎಸಳು ಬೆಳ್ಳುಳ್ಳಿ
- 1cm ಉದ್ದದ ಶುಂಠಿ
ಬೆಂಡೆಕಾಯಿ ಗೊಜ್ಜು ಮಾಡುವ ವಿಧಾನ:
- ಟೊಮೇಟೊ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಅರೆದಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕತ್ತರಿಸಿದ ಬೆಂಡೆಕಾಯಿ ಹಾಕಿ ಹುರಿದಿಟ್ಟುಕೊಳ್ಳಿ.
- ನಂತ್ರ ಅದೇ ಬಾಣಲೆಯಲ್ಲಿ ಎಣ್ಣೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿ.
- ಜೀರಿಗೆ ಸಿಡಿದ ಮೇಲೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ.
- ಆಮೇಲೆ ಅರೆದ ಟೊಮೇಟೊ+ಶುಂಠಿ+ಬೆಳ್ಳುಳ್ಳಿ ಪೇಸ್ಟ್ ನ್ನು ಹಾಕಿ ಬಾಡಿಸಿ.
- ಅದಕ್ಕೆ ಉಪ್ಪು, ಕೆಂಪು ಮೆಣಸಿನಕಾಯಿ ಪುಡಿ, ಗರಂ ಮಸಾಲಾ, ಕೊತ್ತಂಬರಿ ಅಥವಾ ಧನಿಯಾ ಪುಡಿ ಮತ್ತು ಅರಿಶಿನ ಪುಡಿ ಹಾಕಿ ಮಗುಚಿ.
- ಎರಡು ಟೇಬಲ್ ಚಮಚದಷ್ಟು ಮೊಸರು ಹಾಕಿ ಒಂದೆರಡು ನಿಮಿಷ ಬೇಯಿಸಿ.
- ಆಮೇಲೆ ಹುರಿದಿಟ್ಟು ಕೊಂಡ ಬೆಂಡೆಕಾಯಿಯನ್ನು ಹಾಕಿ.
- 1/2 ಕಪ್ ನೀರು ಹಾಕಿ ಒಂದೈದು ನಿಮಿಷ ಬೇಯಿಸಿ.
- ಕೊತ್ತಂಬರಿ ಸೊಪ್ಪು ಮತ್ತು ಕಸೂರಿ ಮೇಥಿ ಹಾಕಿ ಒಂದೆರಡು ನಿಮಿಷ ಕುದಿಸಿ.
- ಸ್ಟವ್ ಆಫ್ ಮಾಡಿ. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ