Onion chutney recipe in Kannada | ಈರುಳ್ಳಿ ಚಟ್ನಿ ಮಾಡುವ ವಿಧಾನ
ಈರುಳ್ಳಿ ಚಟ್ನಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಮಧ್ಯಮ ಗಾತ್ರದ ಈರುಳ್ಳಿ
- 1 ಮಧ್ಯಮ ಗಾತ್ರದ ಟೊಮೇಟೊ ಅಥವಾ ಸಣ್ಣ ನಿಂಬೆಗಾತ್ರದ ಹುಣಿಸೇಹಣ್ಣು
- 2 - 4 ಒಣಮೆಣಸಿನಕಾಯಿ
- 2 ಟೀಸ್ಪೂನ್ ಕಡ್ಲೆಬೇಳೆ
- 2 ಟೀಸ್ಪೂನ್ ಉದ್ದಿನಬೇಳೆ
- 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 4 - 5 ಕರಿಬೇವಿನ ಎಲೆ
- ಒಂದು ದೊಡ್ಡ ಚಿಟಿಕೆ ಅರಿಶಿನ
- ಗೋಲಿಗಾತ್ರದ ಬೆಲ್ಲ
- ಉಪ್ಪು ರುಚಿಗೆ ತಕ್ಕಷ್ಟು
- 2 ಚಮಚ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಉದ್ದಿನಬೇಳೆ
- 4 - 5 ಕರಿಬೇವಿನ ಎಲೆ
- 2 ಟೇಬಲ್ ಚಮಚ ಅಡುಗೆ ಎಣ್ಣೆ
ಈರುಳ್ಳಿ ಚಟ್ನಿ ಮಾಡುವ ವಿಧಾನ:
- ಟೊಮೇಟೊ ಮತ್ತು ಈರುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ.
- ಒಣಮೆಣಸು, ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಬೇಳೆ ಕಂದುಬಣ್ಣಕ್ಕೆ ಬರುವವರೆಗೆ ಹುರಿಯಿರಿ.
- ನಂತ್ರ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಹಾಕಿ. ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ.
- ಆಮೇಲೆ ಕತ್ತರಿಸಿದ ಟೊಮೇಟೊ ಹಾಕಿ ಹುರಿಯಿರಿ. ಟೊಮೇಟೊ ಬದಲು ಹುಣಿಸೆರಸ ಹಾಕಬಹುದು.
- ಉಪ್ಪು, ಬೆಲ್ಲ ಮತ್ತು ಅರಿಶಿನ ಸೇರಿಸಿ, ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ.
- ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಅರೆದಿಟ್ಟುಕೊಳ್ಳಿ.
- ಕೊನೆಯಲ್ಲಿ ಮೆಣಸಿನಕಾಯಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವಿನ ಒಗ್ಗರಣೆಯನ್ನು ಮಾಡಿ.
- ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ