Tomato murukku recipe in Kannada | ಟೊಮೇಟೊ ಮುರುಕ್ಕು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿ ಹಿಟ್ಟು
- 1/4 ಕಪ್ ಹುರಿಗಡಲೆ ಅಥವಾ ಪುಟಾಣಿ
- 1/4 ಕಪ್ ಕಡ್ಲೆಹಿಟ್ಟು
- 2 ಮಧ್ಯಮ ಗಾತ್ರದ ಟೊಮೇಟೊ
- 1 ಟೀ ಸ್ಪೂನ್ ಅಚ್ಚಖಾರದ ಪುಡಿ
- 1 ಟೀ ಸ್ಪೂನ್ ಜೀರಿಗೆ ಅಥವಾ 1/2 ಟೀ ಸ್ಪೂನ್ ಜೀರಿಗೆ ಪುಡಿ
- ದೊಡ್ಡ ಚಿಟಿಕೆ ಇಂಗು
- ಒಂದು ಲಿಂಬೆಹಣ್ಣಿನ ಗಾತ್ರದ ಬೆಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ಕಾಯಿಸಲು
ಟೊಮೇಟೊ ಮುರುಕ್ಕು ಮಾಡುವ ವಿಧಾನ:
- ಹುರಿಗಡಲೆಯನ್ನು ಮಿಕ್ಸಿಜಾರಿನಲ್ಲಿ ಹಾಕಿ ನುಣ್ಣನೆ ಪುಡಿಮಾಡಿ ಕೊಳ್ಳಿ.
- ನಂತರ ಟೊಮ್ಯಾಟೊವನ್ನು ಮಿಕ್ಸಿಜಾರಿನಲ್ಲಿ ನೀರು ಹಾಕದೆ ಅರೆದಿಟ್ಟುಕೊಳ್ಳಿ.
- ಒಂದು ಅಗಲವಾದ ಪಾತ್ರೆಯಲ್ಲಿ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ.
- ಅದಕ್ಕೆ 2 - 3 ಟೇಬಲ್ ಚಮಚ ಹುರಿಗಡಲೆ ಹಿಟ್ಟು ಸೇರಿಸಿ.
- ನಂತ್ರ ಕಡ್ಲೆಹಿಟ್ಟು ಸೇರಿಸಿ.
- ಆಮೇಲೆ ಖಾರದಪುಡಿ, ಜೀರಿಗೆ ಪುಡಿ, ಇಂಗು ಮತ್ತು ಉಪ್ಪು ಹಾಕಿ.
- ಬೆಣ್ಣೆ ಸೇರಿಸಿ, ಚೆನ್ನಾಗಿ ತಿಕ್ಕಿ ಕಲಸಿ.
- ಸ್ವಲ್ಪ ಸ್ವಲ್ಪವೇ ಟೊಮೇಟೊ ಪೇಸ್ಟ್ ಸೇರಿಸಿ, ಗಟ್ಟಿ ಆದರೆ ಮೃದುವಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಚಕ್ಕುಲಿ ಒತ್ತಲು ಆಗುವಷ್ಟು ಮೆತ್ತಗಿದ್ದರೆ ಸಾಕು.
- ಎಣ್ಣೆ ಬಿಸಿ ಮಾಡಿ.
- ಚಕ್ಕುಲಿ ಅಚ್ಚನ್ನು ಉಪಯೋಗಿಸಿ ಮುರುಕ್ಕನ್ನು ನೇರವಾಗಿ ಬಿಸಿ ಎಣ್ಣೆಗೆ ಒತ್ತಿ. ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ