Jeerige kashaya recipe in Kannada | ಜೀರಿಗೆ ಕಷಾಯ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು (ಮಕ್ಕಳಿಗೆ): (ಅಳತೆ ಕಪ್ = 240 ಎಂಎಲ್ )
- 2 ಟೇಬಲ್ ಚಮಚ ಜೀರಿಗೆ
- 2 ಲೋಟ ನೀರು
- ಚಿಟಿಕೆ ಉಪ್ಪು ಅಥವಾ ಸ್ವಲ್ಪ ಬೆಣ್ಣೆ ಅಥವಾ ಸ್ವಲ್ಪ ಹಾಲು
ಜೀರಿಗೆ ಕಷಾಯ ಮಾಡುವ ವಿಧಾನ:
- ಒಂದು ಬಾಣಲೆ ಬಿಸಿ ಮಾಡಿ ಜೀರಿಗೆಯನ್ನು ಚಟಪಟ ಎನ್ನುವಂತೆ ಹುರಿಯಿರಿ.
- ಕೂಡಲೇ ಸ್ಟವ್ ಸಣ್ಣ ಮಾಡಿ, ಎರಡು ಕಪ್ ನೀರು ಸೇರಿಸಿ.
- ಐದು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ.
- ಒಂದೆರಡು ನಿಮಿಷ ಬಿಟ್ಟು ಜೀರಿಗೆ ಕಷಾಯವನ್ನು ಲೋಟಕ್ಕೆ ಬಗ್ಗಿಸಿ. ಜೀರಿಗೆ ತಿನ್ನುವ ಅಗತ್ಯವಿಲ್ಲ.
- ಅದಕ್ಕೆ ಚಿಟಿಕೆ ಉಪ್ಪು (ಅಜೀರ್ಣಕ್ಕೆ) ಅಥವಾ ಅರ್ಧ ಚಮಚ ಬೆಣ್ಣೆ (ಉಷ್ಣ ವಾಯು ಮತ್ತು ಮೈಕೈ ನೋವು) ಅಥವಾ ಸ್ವಲ್ಪ ಹಾಲು (ಅಜೀರ್ಣ, ವಾಯು ಉಪದ್ರ ಮತ್ತು ಸೊಂಟ ನೋವು) ಸೇರಿಸಿ ಕುಡಿಯಿರಿ. ಸುಮಾರು 50ml ನಷ್ಟು ಕುಡಿದರೆ ಸಾಕು.


