Rave uttappa recipe in Kannada | ರವೆ ಉತ್ತಪ್ಪ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಮೀಡಿಯಂ ರವೆ
- 0.5 ಕಪ್ ಮೊಸರು (ಸ್ವಲ್ಪ ಹುಳಿ ಇದ್ದರೆ ಒಳ್ಳೆಯದು )
- 2 ಈರುಳ್ಳಿ
- 4 ಟೇಬಲ್ ಚಮಚ ಕಡ್ಲೆಕಾಯಿ ಅಥವಾ ಶೇಂಗಾ
- 1 ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಟೇಬಲ್ ಚಮಚ ಹೆಚ್ಚಿದ ಕರಿಬೇವು
- 5 - 6 ಚಮಚ ಎಣ್ಣೆ / ತುಪ್ಪ
- ಉಪ್ಪು ರುಚಿಗೆ ತಕ್ಕಷ್ಟು
ರವೆ ಉತ್ತಪ್ಪ ಮಾಡುವ ವಿಧಾನ:
- ದೊಡ್ಡ ಬಟ್ಟಲಿನಲ್ಲಿ ರವೆ ತೆಗೆದುಕೊಳ್ಳಿ.
- ಮೊಸರು ಹಾಕಿ ಕಲಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ಗಟ್ಟಿಯಾದ ದೋಸೆಹಿಟ್ಟಿನ ಹದಕ್ಕೆ ಹಿಟ್ಟನ್ನು ತಯಾರಿಸಿ. ನಾನು ಸುಮಾರು 3/4 ಕಪ್ ನಷ್ಟು ನೀರು ಬಳಸಿದ್ದೇನೆ.
- ಚೆನ್ನಾಗಿ ಕಲಸಿ, ಪಕ್ಕಕ್ಕಿಡಿ.
- 4 ಟೇಬಲ್ ಚಮಚ ಕಡ್ಲೆಕಾಯಿ ಅಥವಾ ಶೇಂಗಾ ವನ್ನು ಮಧ್ಯಮ ಉರಿಯಲ್ಲಿ ಹುರಿದು, ಸಿಪ್ಪೆ ತೆಗೆದು, ಎರಡು ಭಾಗ ಮಾಡಿಟ್ಟುಕೊಳ್ಳಿ.
- ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ, ೧ ಚಮಚ ಎಣ್ಣೆ ಹಾಕಿ, ಹುರಿದುಟ್ಟುಕೊಳ್ಳಿ.
- ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಉಪ್ಪನ್ನು ತಯಾರಿಸಿದ ಹಿಟ್ಟಿಗೆ ಸೇರಿಸಿ.
- ಹುರಿದ ಕಡ್ಲೆಕಾಯಿ ಮತ್ತು ಹುರಿದ ಈರುಳ್ಳಿಯನ್ನೂ ಹಾಕಿ ಚೆನ್ನಾಗಿ ಕಲಸಿ. ಹಿಟ್ಟು ಗಟ್ಟಿಯಾದ ದೋಸೆ ಹಿಟ್ಟಿನಂತಿರಬೇಕು. ಬೇಕಾದಲ್ಲಿ ನೀರು ಸೇರಿಸಿ.
- ದೋಸೆ ಕಲ್ಲು ಅಥವಾ ತವ ಬಿಸಿ ಮಾಡಿ. ಒಂದು ಸೌಟು ಹಿಟ್ಟು ಸುರಿದು ಸ್ವಲ್ಪ ಹರಡಿ. ಮುಚ್ಚಳ ಮುಚ್ಚಿ ಬೇಯಿಸಿ.
- ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ.
- ಎರಡೂ ಬದಿ ಕಾಯಿಸಿ. ಕಾಯಿ ಚಟ್ನಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ