Menasina saaru recipe in Kannada | ಮೆಣಸಿನ ಸಾರು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)
- 1/4 ಕಪ್ ತೊಗರಿಬೇಳೆ
- 2 ಮಧ್ಯಮ ಗಾತ್ರದ ಟೊಮೇಟೊ
- 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 1.5 ಚಮಚ ಕೊತ್ತಂಬರಿ ಅಥವಾ ಧನಿಯಾ ಪುಡಿ
- 1/2 ಟೀಸ್ಪೂನ್ ಜೀರಿಗೆ ಪುಡಿ
- 1 ಟೀಸ್ಪೂನ್ ಕರಿಮೆಣಸಿನ ಪುಡಿ
- 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- ಇಂಗು ಒಂದು ಚಿಟಿಕೆ
- 4 ಎಸಳು ಬೆಳ್ಳುಳ್ಳಿ ಜಜ್ಜಿದ್ದು
- 5 - 6 ಕರಿಬೇವಿನ ಎಲೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಮೆಣಸಿನ ಸಾರು ಮಾಡುವ ವಿಧಾನ:
- ತೊಗರಿಬೇಳೆಯನ್ನು ತೊಳೆದು, ಚಿಟಿಕೆ ಅರಿಶಿನ ಮತ್ತು ಎರಡು ಹನಿ ಎಣ್ಣೆ ಹಾಕಿ ಬೇಯಿಸಿ.
- ನಂತರ ಅದಕ್ಕೆ ಎರಡು ಭಾಗ ಮಾಡಿದ ಟೊಮೇಟೊ ಹಾಕಿ ಬೇಯಿಸಿ.
- ಟೊಮೇಟೊ ಸಿಪ್ಪೆ ತೆಗೆದು, ಬೇಳೆ ಮತ್ತು ಟೊಮ್ಯಾಟೊವನ್ನು ಚೆನ್ನಾಗಿ ಹಿಸುಕಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ. ಸ್ಟವ್ ಮೇಲೆ ಕುದಿಯಲು ಇಡೀ.
- ಉಪ್ಪು ಮತ್ತು ಹುಣಿಸೆರಸ ಸೇರಿಸಿ.
- ಕೊನೆಯಲ್ಲಿ ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಕರಿಮೆಣಸಿನ ಪುಡಿ ಸೇರಿಸಿ.
- ಚೆನ್ನಾಗಿ ಮಗುಚಿ, ಒಂದು ಕುದಿ ಕುದಿಸಿ.
- ಒಗ್ಗರಣೆ ಸೌಟು ಬಳಸಿಕೊಂಡು 2 ಚಮಚಎಣ್ಣೆ, 1/2 ಚಮಚ ಸಾಸಿವೆ, ಇಂಗು, ಜಜ್ಜಿದ ಬೆಳ್ಳುಳ್ಳಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ. ಬಿಸಿಯಾದ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ