Seven cup burfi recipe in Kannada | ಸೆವೆನ್ ಕಪ್ ಬರ್ಫಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 1 ಕಪ್ ಕಡ್ಲೆಹಿಟ್ಟು
- 2 - 2.5 ಕಪ್ ಸಕ್ಕರೆ
- 1 ಕಪ್ ಹಾಲು
- 1 ಕಪ್ ತುಪ್ಪ
- 1 ಕಪ್ ತೆಂಗಿನ ತುರಿ
ಸೆವೆನ್ ಕಪ್ ಬರ್ಫಿ ಮಾಡುವ ವಿಧಾನ:
- ಒಂದು ಟ್ರೇ ಅಥವಾ ತಟ್ಟೆಯನ್ನು ತುಪ್ಪ ಸವರಿ ಇಟ್ಟುಕೊಳ್ಳಿ.
- ತೆಂಗಿನ ತುರಿಯನ್ನು ನೀರು ಹಾಕದೆ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ.
- ಒಂದು ಬಾಣಲೆಯಲ್ಲಿ ಕಡ್ಲೆಹಿಟ್ಟನ್ನು ಹಾಕಿ ಹುರಿಯಲು ಪ್ರಾರಂಭಿಸಿ.
- ಮಧ್ಯಮ ಉರಿಯಲ್ಲಿ 4 - 4 ನಿಮಿಷ ಹುರಿದ ನಂತರ ಸಕ್ಕರೆಯನ್ನು ಸೇರಿಸಿ. ಹುರಿಯುವುದನ್ನು ಮುಂದುವರೆಸಿ.
- ಕೂಡಲೇ ಪುಡಿ ಮಾಡಿದ ತೆಂಗಿನ ತುರಿಯನ್ನು ಸೇರಿಸಿ. ಹುರಿಯುವುದನ್ನು ಮುಂದುವರೆಸಿ.
- ಕೂಡಲೇ ಹಾಲನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಮಗುಚುವುದನ್ನು ಮುಂದುವರೆಸಿ.
- ಕೂಡಲೇ ತುಪ್ಪವನ್ನು ಸೇರಿಸಿ ಮಗುಚುವುದನ್ನು ಮುಂದುವರೆಸಿ.
- ಸ್ವಲ್ಪ ಸಮಯದಲ್ಲಿ ಗಟ್ಟಿಯಾಗಲು ಪ್ರಾರಂಭಿಸುತ್ತದೆ.
- ಬಾಣಲೆಯ ಬದಿಯನ್ನು ಹೆರಸುತ್ತ ಮಗುಚುವುದನ್ನ ಮುಂದುವರೆಸಿ.
- ಕೊನೆಯಲ್ಲಿ ಮಿಶ್ರಣ ತಳ ಬಿಡಲು ಪ್ರಾರಂಭವಾದಾಗ ಮತ್ತು ಮಿಶ್ರಣ ಸ್ವಲ್ಪ ಬಿಳಿ ಬಣ್ಣಕ್ಕೆ ತಿರುಗಿದಾಗ ಸ್ಟವ್ ಆಫ್ ಮಾಡಿ.
- ತುಪ್ಪ ಸವರಿದ ಟ್ರೇ ಗೆ ಹಾಕಿ.
- ಕೂಡಲೇ ನಿಮಗೆ ಇಷ್ಟವಾದ ಆಕಾರಕ್ಕೆ ತುಪ್ಪ ಹಚ್ಚಿದ ಚಾಕುವಿನಿಂದ ಕತ್ತರಿಸಿ.
- ಬಿಸಿ ಆರಿದ ಮೇಲೆ ಎಚ್ಚರಿಕೆಯಿಂದ ದೋಸೆ ಸಟ್ಟುಗ ಉಪಯೋಗಿಸಿ ತೆಗೆಯಿರಿ. ರುಚಿಯಾದ ಸೆವೆನ್ ಕಪ್ ಬರ್ಫಿ ಸವಿಯಲು ಸಿದ್ದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ