Coconut rice recipe in Kannada | ಕೊಕೊನಟ್ ರೈಸ್ ಮಾಡುವ ವಿಧಾನ
ಕೊಕೊನಟ್ ರೈಸ್ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1 ಕಪ್ ಅಕ್ಕಿ (ಸೋನಾ ಮಸೂರಿ)
- 1/2 ಕಪ್ ತೆಂಗಿನ ತುರಿ
- 1/2 ಟೀಸ್ಪೂನ್ ಸಾಸಿವೆ
- 2 ಟೇಬಲ್ ಸ್ಪೂನ್ ಶೇಂಗಾ / ಕಡಲೆಕಾಯಿ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡ್ಲೆಬೇಳೆ
- 1ಹಸಿರು ಮೆಣಸಿನಕಾಯಿ
- 1 ಒಣ ಮೆಣಸಿನಕಾಯಿ
- 4 - 5 ಗೋಡಂಬಿ
- 1/2 ಟೀಸ್ಪೂನ್ ಹೆಚ್ಚಿದ ಶುಂಠಿ
- ಚಿಟಿಕೆ ಇಂಗು
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
- 1/2 ಟೀಸ್ಪೂನ್ ಸಕ್ಕರೆ
- 5 - 6 ಕರಿಬೇವಿನ ಎಲೆ
- 4 ಟೇಬಲ್ ಸ್ಪೂನ್ ತುಪ್ಪ ಅಥವಾ ತೆಂಗಿನ ಎಣ್ಣೆ (ಬೇರೆ ಎಣ್ಣೆಯನ್ನೂ ಉಪಯೋಗಿಸಬಹುದು)
ಕೊಕೊನಟ್ ರೈಸ್ ಮಾಡುವ ವಿಧಾನ:
- ಒಂದು ಕುಕ್ಕರ್ ನಲ್ಲಿ ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ಅನ್ನ ಸ್ವಲ್ಪ ಉದುರುದುರಾಗಿರಲಿ.
- ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಮೊದಲಿಗೆ ಶೇಂಗಾ ಅಥವಾ ಕಡಲೆಕಾಯಿಯನ್ನು ಹಾಕಿ.
- ಕಡಲೆಕಾಯಿ ಸ್ವಲ್ಪ ಕಾದು ಸಿಡಿಯಲು ಪ್ರಾರಂಭಿಸಿದ ಕೂಡಲೇ ಸಾಸಿವೆ, ಕಡ್ಲೆಬೇಳೆ ಮತ್ತು ಉದ್ದಿನ ಬೇಳೆಯನ್ನು ಸೇರಿಸಿ.
- ಸಾಸಿವೆ ಸಿಡಿದ ಕೂಡಲೇ ಹಸಿರು ಮೆಣಸಿನಕಾಯಿ, ಒಣಮೆಣಸಿನಕಾಯಿ, ಗೋಡಂಬಿ, ಇಂಗು ಮತ್ತು ಶುಂಠಿ ಸೇರಿಸಿ ಹುರಿಯಿರಿ.
- ನಂತರ ಕರಿಬೇವಿನ ಎಲೆ ಹಾಕಿ ಹುರಿಯಿರಿ.
- ತೆಂಗಿನ ತುರಿ, ಸಕ್ಕರೆ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಸ್ಟೋವ್ ಆಫ್ ಮಾಡಿ.
- ನಂತರ ಬೇಯಿಸಿದ ಅನ್ನ ಸೇರಿಸಿ.
- ಒಂದು ಚಪ್ಪಟೆಯಾದ ಸಟ್ಟುಗದಿಂದ ಕಲಸಿ. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ.
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ