Paduvalakai jeerige kootu recipe in Kannada | ಪಡುವಲಕಾಯಿ ಕಲಾಸು ಮಾಡುವ ವಿಧಾನ
ಪಡುವಲಕಾಯಿ ಕೂಟು ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಸಣ್ಣ ಗಾತ್ರದ ಪಡುವಲಕಾಯಿ
- 1 - 2 ಹಸಿರು ಮೆಣಸಿನಕಾಯಿ
- ಒಂದು ಚಿಟಿಕೆ ಅರಶಿನ ಪುಡಿ
- 1 ನಿಂಬೆ ಗಾತ್ರದ ಬೆಲ್ಲ
- ಉಪ್ಪು ರುಚಿಗೆ ತಕ್ಕಷ್ಟು
ಅರೆಯಲು ಬೇಕಾಗುವ ಪದಾರ್ಥಗಳು:
- 1/2 ಕಪ್ ತೆಂಗಿನ ತುರಿ
- 2 ಟೀಸ್ಪೂನ್ ಅಕ್ಕಿ
- 1/2 ಟೀಸ್ಪೂನ್ ಜೀರಿಗೆ
- 1 ಹಸಿರುಮೆಣಸಿನಕಾಯಿ (ಬೇಕಾದಲ್ಲಿ)
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1 ಕೆಂಪು ಮೆಣಸಿನಕಾಯಿ
- 5 - 6 ಕರಿಬೇವಿನ ಎಲೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಪಡುವಲಕಾಯಿ ಅಥವಾ ಪಟ್ಲಕಾಯಿ ಕಲಾಸು ಮಾಡುವ ವಿಧಾನ:
- ಪಡುವಲಕಾಯಿಯನ್ನು ಹೊರಗಿನ ಸಿಪ್ಪೆ ಹೆರೆಸಿ, ತೊಳೆದು ಸಣ್ಣದಾಗಿ ಕತ್ತರಿಸಿ. ನಡುವಿನ ಬೀಜ ಇರುವ ಭಾಗವನ್ನು ಹಾಕುವುದು ಬೇಡ.
- ಕತ್ತರಿಸಿದ ಪಡುವಲಕಾಯಿ, ಅರಶಿನ, ಉಪ್ಪು, ಸೀಳಿದ ಹಸಿರು ಮೆಣಸಿನಕಾಯಿ, ಬೆಲ್ಲ ಮತ್ತು ನೀರು ಹಾಕಿ ಬೇಯಿಸಿ.
- ಜೀರಿಗೆ, ತೆಂಗಿನ ತುರಿ ಮತ್ತು ತೊಳೆದ ಅಕ್ಕಿಯನ್ನು ಮಿಕ್ಸಿಯಲ್ಲಿ ಅರೆಯಿರಿ. ಬೇಕಾದಲ್ಲಿ ಒಂದು ಹಸಿರುಮೆಣಸಿನಕಾಯಿ ಸೇರಿಸಬಹುದು. ಆದರೆ ಈ ಸಾಂಬಾರ್ ಕಡಿಮೆ ಖಾರವಿದ್ದು ಸ್ವಲ್ಪ ಸಿಹಿಯಾಗಿದ್ದರೆ ಚೆನ್ನ.
- ಬೇಯಿಸಿದ ಪಡುವಲಕಾಯಿಗೆ ಅರೆದ ಮಸಾಲೆ ಹಾಕಿ.
- ಬೇಕಾದಲ್ಲಿ ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ.
- ಈ ಸಾಂಬಾರ್ ಸ್ವಲ್ಪ ದಪ್ಪ ಇರಬೇಕು. ಒಂದು ಕುದಿ ಕುದಿಸಿ, ಸ್ಟವ್ ಆಫ್ ಮಾಡಿ.
- ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ