Bakery style peda recipe in Kannada | ಬೇಕರಿ ಶೈಲಿಯ ಪೇಡ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಹಾಲಿನ ಪುಡಿ
- 1 ಕಪ್ ಹಾಲು
- 0.25 ಕಪ್ ಮೈದಾ
- 1/3 ಕಪ್ ಸಕ್ಕರೆ
- 2 ಟೇಬಲ್ ಚಮಚ ತುಪ್ಪ
- ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
- ಒಂದು ದೊಡ್ಡ ಚಿಟಿಕೆ ಕೇಸರಿ (ಬೇಕಾದಲ್ಲಿ)
- ಒಂದು ಚಿಟಿಕೆ ಜಾಯಿಕಾಯಿ ಪುಡಿ (ಬೇಕಾದಲ್ಲಿ)
ಬೇಕರಿ ಶೈಲಿಯ ಪೇಡ ಮಾಡುವ ವಿಧಾನ:
- ಒಂದು ನಾನ್ ಸ್ಟಿಕ್ ಕಡಾಯಿಯಲ್ಲಿ ಹಾಲಿನಪುಡಿ, ಸಕ್ಕರೆ, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ (ಬೇಕಾದಲ್ಲಿ) ಮತ್ತು ಕೇಸರಿಯನ್ನು (ಬೇಕಾದಲ್ಲಿ)ತೆಗೆದುಕೊಳ್ಳಿ.
- ಅದಕ್ಕೆ ಹಾಲು ಹಾಕಿ ಗಂಟಿಲ್ಲದಂತೆ ಕಲಸಿ.
- ನಂತರ ಕಡಾಯಿಯನ್ನು ಸ್ಟವ್ ಮೇಲಿರಿಸಿ, ಮಗುಚುತ್ತಾ ಮೈದಾ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ. ಗಂಟಿಲ್ಲದಂತೆ ಮಗುಚಿ.
- ನಂತರ ನಿರಂತರವಾಗಿ ಮಧ್ಯಮ ಉರಿಯಲ್ಲಿ ಮಗುಚಲು ಪ್ರಾರಂಭಿಸಿ.
- ಸ್ವಲ್ಪ ಗಟ್ಟಿಯಾದ ನಂತರ ತುಪ್ಪ ಹಾಕಿ ಮಗುಚುವುದನ್ನು ಮುಂದುವರೆಸಿ.
- ಸ್ವಲ್ಪ ಸಮಯದಲ್ಲಿ ತಳ ಬಿಡಲು ಪ್ರಾರಂಭವಾಗುತ್ತದೆ. ಮೆತ್ತಗಿನ ಮುದ್ದೆಯಾಗುವವರೆಗೆ ಮಗುಚುವುದನ್ನು ಮುಂದುವರೆಸಿ. ಆಗ ಸ್ಟವ್ ಆಫ್ ಮಾಡಿ. ಸ್ವಲ್ಪ ಮಿಶ್ರಣವನ್ನು ತೆಗೆದು ಉಂಡೆ ಮಾಡಿದಾಗ ಕೈಗೆ ಅಂಟಬಾರದು.
- ಬಿಸಿ ಆರಿದ ಮೇಲೆ ಪೇಡ ಗಳನ್ನು ತಯಾರಿಸಿ. ಪೇಡ ಮಾಡುವಾಗ ಕೈಗೆ ಅಂಟುತ್ತಿದ್ದರೆ ಪುನಃ ಒಲೆಯ ಮೇಲಿಟ್ಟು ಒಂದೆರಡು ನಿಮಿಷ ಮಗುಚಿ. ಬಿಸಿ ಆರಿದ ಮೇಲೆ ಪೇಡ ತಯಾರಿಸಿ.
- ಬಿಸಿ ಸಂಪೂರ್ಣ ಆರಿದ ಮೇಲೆ ಸವಿದು ಆನಂದಿಸಿ.
Oho Maids Haki Madtaro Peda ,
ಪ್ರತ್ಯುತ್ತರಅಳಿಸಿThanks for information
Dhanyavadagalu
ಅಳಿಸಿ