Roasted kadlekai chat recipe in Kannada | ಹುರಿದ ಕಡ್ಲೇಕಾಯಿ ಚಾಟ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ನೆಲಗಡಲೆ ಅಥವಾ ಕಡ್ಲೆಕಾಯಿ
- 1 ಸಣ್ಣದಾಗಿ ಕೊಚ್ಚಿದ ಈರುಳ್ಳಿ
- 1 ಸಣ್ಣದಾಗಿ ಕೊಚ್ಚಿದ ಟೊಮೆಟೊ
- 1 ತುರಿದ ಸಣ್ಣ ಗಾತ್ರದ ಕ್ಯಾರೆಟ್
- 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ ( ಬೇಕಾದಲ್ಲಿ - ಹೆಚ್ಚಿನ ಖಾರಕ್ಕಾಗಿ)
- 1/2 ಟೀಸ್ಪೂನ್ ಅಚ್ಚ ಖಾರದ ಪುಡಿ
- 1/4 ಟೀಸ್ಪೂನ್ ಚಾಟ್ ಮಸಾಲಾ (ಬೇಕಾದಲ್ಲಿ)
- ಉಪ್ಪು ರುಚಿಗೆ ತಕ್ಕಷ್ಟು
ಹುರಿದ ಕಡ್ಲೇಕಾಯಿ ಚಾಟ್ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಕಡ್ಲೆಕಾಯಿಯನ್ನು ಗರಿಗರಿಯಾಗುವವರೆಗೆ ಹುರಿಯಿರಿ.
- ಆ ಸಮಯದಲ್ಲಿ ಒಂದು ಸಣ್ಣ ಬಟ್ಟಲಿನಲ್ಲಿ ಎರಡು ಟೇಬಲ್ ಚಮಚ ನೀರು, ಉಪ್ಪು ಮತ್ತು ಇಂಗು ಹಾಕಿ, ಉಪ್ಪು-ಇಂಗಿನ ನೀರು ತಯಾರಿಸಿ.
- ಅದನ್ನು ಹುರಿಯುತ್ತಿರುವ ಕಡ್ಲೆಕಾಯಿಗೆ ಹಾಕಿ ಪುನಃ ಗರಿಗರಿಯಾಗುವವರೆಗೆ ಹುರಿಯಿರಿ.
- ದೊಡ್ಡ ಬಟ್ಟಲಿನಲ್ಲಿ ಸಣ್ಣದಾಗಿ ಕೊಚ್ಚಿದ ಈರುಳ್ಳಿ, ತುರಿದ ಕ್ಯಾರೆಟ್, ಹೆಚ್ಚಿದ ಕೊತ್ತಂಬರಿ ಸೊಪ್ಪು , ಹಸಿರು ಮೆಣಸಿನ ಕಾಯಿ (ಬೇಕಾದಲ್ಲಿ) ಮತ್ತು ಟೊಮೆಟೊ ತೆಗೆದುಕೊಳ್ಳಿ.
- ನಂತರ ಹುರಿದ ಕಡ್ಲೇಕಾಯಿ ಅಥವಾ ಶೇಂಗಾ ಸೇರಿಸಿ.
- ಈಗ ಅಚ್ಚ ಖಾರದ ಪುಡಿ, ಉಪ್ಪು ಮತ್ತು ಚಾಟ್ ಮಸಾಲಾ ಸೇರಿಸಿ.
- ಚೆನ್ನಾಗಿ ಕಲಸಿ ತಕ್ಷಣವೇ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ