Mandakki dose recipe in Kannada | ಮಂಡಕ್ಕಿ ದೋಸೆ ಮಾಡುವ ವಿಧಾನ
ಮಂಡಕ್ಕಿ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
- 1 ಕಪ್ ಅಕ್ಕಿ
- 1 ಟೀಸ್ಪೂನ್ ಮೆಂತ್ಯ
- 2 ಕಪ್ ಮಂಡಕ್ಕಿ
- ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
- ಉಪ್ಪು ರುಚಿಗೆ ತಕ್ಕಷ್ಟು.
ಮಂಡಕ್ಕಿ ದೋಸೆ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿಅಕ್ಕಿ ಮತ್ತು ಮೆಂತೆಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
- ಇನ್ನೊಂದು ಪಾತ್ರೆಯಲ್ಲಿ ಮಂಡಕ್ಕಿಯನ್ನು ಹತ್ತು ನಿಮಿಷ ನೆನೆಯಲು ಬಿಡಿ.
- ನೆನೆಸಿದ ಅಕ್ಕಿ ಮತ್ತು ಮೆಂತೆಯನ್ನು ಮಿಕ್ಸಿಜಾರಿನಲ್ಲಿ ತೆಗೆದುಕೊಳ್ಳಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
- ಆನಂತರ ನೆನೆಸಿದ ಮಂಡಕ್ಕಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆದು ಅದೇ ಪಾತ್ರೆಗೆಹಾಕಿ.
- ಹಿಟ್ಟನ್ನು ಚೆನ್ನಾಗಿ ಕಲಸಿ.
- ಮುಚ್ಚಳವನ್ನು ಮುಚ್ಚಿ, 7 - 8 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
- ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ.
- ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ತೆಳ್ಳಗಿನ ದೋಸೆ ಮಾಡಿ.
- ಮುಚ್ಚಳವನ್ನು ಮುಚ್ಚಿ ಬೇಯಿಸಿ.
- ಮುಚ್ಚಳವನ್ನು ತೆಗೆದು, ತುಪ್ಪ ಅಥವಾ ಎಣ್ಣೆ ಹಾಕಿ ಖಾಯಿಸಿ.
- ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ