ಮಂಗಳವಾರ, ಅಕ್ಟೋಬರ್ 24, 2023

Tavare beejada payasa recipe in Kannada | ತಾವರೆ ಬೀಜದ ಪಾಯಸ ಮಾಡುವ ವಿಧಾನ

 

Tavare beejada payasa recipe in Kannada

Tavare beejada payasa recipe in Kannada | ತಾವರೆ ಬೀಜದ ಪಾಯಸ ಮಾಡುವ ವಿಧಾನ

ತಾವರೆ ಬೀಜದ ಪಾಯಸ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಕಪ್ ತಾವರೆ ಬೀಜ
  2. 1/2 ಕಪ್  ಸಕ್ಕರೆ
  3. 2 ಕಪ್ ಹಾಲು
  4. 1 ಟೇಬಲ್ ಚಮಚ ತುಪ್ಪ
  5. 5 - 6 ಗೋಡಂಬಿ
  6. 8 - 10 ಒಣದ್ರಾಕ್ಷಿ
  7. ಚಿಟಿಕೆ ಕೇಸರಿದಳ (ಬೇಕಾದಲ್ಲಿ)
  8. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ

ಅವಲಕ್ಕಿ ಪಾಯಸ ಮಾಡುವ ವಿಧಾನ:

  1. ಮೊದಲಿಗೆ ಒಂದು ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ, ಗೋಡಂಬಿ ಮತ್ತು ದ್ರಾಕ್ಷಿ ಹುರಿದು ಎತ್ತಿಡಿ. 
  2. ನಂತರ ಅದೇ ಬಾಣಲೆಯಲ್ಲಿ ತಾವರೆ ಬೀಜವನ್ನು ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿಯಿರಿ. 
  3. 2/3 ಭಾಗದಷ್ಟು ಹುರಿದ ತಾವರೆ ಬೀಜವನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ. ಉಳಿದ 1/3 ಭಾಗವನ್ನು ಹಾಗೆ ಎತ್ತಿಟ್ಟಿರಿ. 
  4. ಅದೇ ಬಾಣಲೆಗೆ ಹಾಲನ್ನು ಹಾಕಿ ಕುದಿಯಲು ಇಡಿ. 
  5. ಕುದಿಯಲು ಪ್ರಾರಂಭವಾದ ಕೂಡಲೇ ಎತ್ತಿಟ್ಟ 1/3 ಭಾಗದಷ್ಟು ತಾವರೆ ಬೀಜವನ್ನು ಸೇರಿಸಿ, ಕುದಿಸುವುದನ್ನು ಮುಂದುವರೆಸಿ. 
  6. ಸಕ್ಕರೆಯನ್ನು ಸೇರಿಸಿ. 
  7. ನಂತರ ಪುಡಿಮಾಡಿದ ತಾವರೆ ಬೀಜವನ್ನು ಸೇರಿಸಿ. ಆಗಾಗ್ಯೆ ಮಗುಚುತ್ತಾ ಕುದಿಸುವುದನ್ನು ಮುಂದುವರೆಸಿ. 
  8. ಆಮೇಲೆ  ಕೇಸರಿದಳ ಮತ್ತು ಹುರಿದಿಟ್ಟ ದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ. 
  9. ಕೊನೆಯಲ್ಲಿ ಏಲಕ್ಕಿ ಪುಡಿಯನ್ನು ಸೇರಿಸಿ. 
  10. ಸ್ಟೋವ್ ಆಫ್ ಮಾಡಿ. ರುಚಿಕರ ಪಾಯಸವನ್ನು ಸವಿಯಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಅಕ್ಟೋಬರ್ 20, 2023

Masale avalakki recipe in Kannada | ಹಸಿರು ಮಸಾಲೆ ಅವಲಕ್ಕಿ ಮಾಡುವ ವಿಧಾನ

 

Hasiru masale avalakki recipe in Kannada

Masale avalakki recipe in Kannada | ಹಸಿರು ಮಸಾಲೆ ಅವಲಕ್ಕಿ ಮಾಡುವ ವಿಧಾನ

ಮಸಾಲೆ ಅವಲಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 3 ಕಪ್ ತೆಳು ಅವಲಕ್ಕಿ
  2. 1 ಕಪ್ ತೆಂಗಿನತುರಿ
  3. 2 ಹಸಿಮೆಣಸಿನಕಾಯಿ
  4. ಸ್ವಲ್ಪ ಕರಿಬೇವು
  5. ಸ್ವಲ್ಪ ಕೊತ್ತಂಬರಿ ಸೊಪ್ಪು
  6. 1 - 2 ಟೀಸ್ಪೂನ್ ನಿಂಬೆಹಣ್ಣಿನ ರಸ
  7. ರುಚಿಗೆ ತಕ್ಕಂತೆ ಉಪ್ಪು
  8. ರುಚಿಗೆ ತಕ್ಕಂತೆ ಸಕ್ಕರೆ

ಹಸಿರು ಮಸಾಲೆ ಅವಲಕ್ಕಿ ಮಾಡುವ ವಿಧಾನ:

  1. ಒಂದು ಮಿಕ್ಸಿಜಾರಿನಲ್ಲಿ ತೆಂಗಿನತುರಿ, ಹಸಿಮೆಣಸಿನಕಾಯಿ ಮತ್ತು ಕರಿಬೇವನ್ನು ತೆಗೆದುಕೊಳ್ಳಿ. 
  2. ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
  3. ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ.  
  4. ರುಚಿಗೆ ತಕ್ಕಂತೆ ಸಕ್ಕರೆಯನ್ನು ಸೇರಿಸಿ. 
  5. ನಿಂಬೆಹಣ್ಣಿನ ರಸವನ್ನೂ ಸೇರಿಸಿ. 
  6. ನೀರು ಹಾಕದೇ ಪುಡಿಮಾಡಿಕೊಳ್ಳಿ. 
  7. ಒಂದು ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ.
  8. ಚೆನ್ನಾಗಿ ಹಿಸುಕಿ ಕಲಸಿ. 
  9. ಬೆಳಗ್ಗಿನ ತಿಂಡಿಗೆ ಅಥವಾ ಸಂಜೆ ಟೀ ಯೊಂದಿಗೆ ಸವಿದು ಆನಂದಿಸಿ. ಕಡ್ಲೆ ಉಸ್ಲಿಯೊಂದಿಗೆ ಬಡಿಸಿದರೆ ಬಹಳ ಚೆನ್ನಾಗಿರುತ್ತದೆ. 


ಶುಕ್ರವಾರ, ಅಕ್ಟೋಬರ್ 6, 2023

Ragi hesaru kalu dose recipe in Kannada | ರಾಗಿ ಹೆಸರು ಕಾಳು ದೋಸೆ ಮಾಡುವ ವಿಧಾನ

 

Ragi hesaru kalu dose recipe in Kannada | ರಾಗಿ ಹೆಸರು ಕಾಳು ದೋಸೆ ಮಾಡುವ ವಿಧಾನ


ರಾಗಿ ಮತ್ತು ಹೆಸರುಕಾಳು ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಹೆಸರು ಕಾಳು
  2. 1/2 ಕಪ್ ರಾಗಿ
  3. 1/2 ಕಪ್ ತೆಂಗಿನತುರಿ
  4. 2 - 3 ಹಸಿರುಮೆಣಸಿನಕಾಯಿ
  5. ಸ್ವಲ್ಪ ಕೊತ್ತಂಬರಿ ಸೊಪ್ಪು
  6. 1cm ಉದ್ದದ ಶುಂಠಿ 
  7. 1 ಟೀಸ್ಪೂನ್ ಜೀರಿಗೆ
  8. ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು
  9. ಉಪ್ಪು ರುಚಿಗೆ ತಕ್ಕಷ್ಟು.

ಹೆಸರು ಕಾಳು ದೋಸೆ ಮಾಡುವ ವಿಧಾನ:

  1. ಹೆಸರು ಕಾಳು ಮತ್ತು ರಾಗಿಯನ್ನು ಚೆನ್ನಾಗಿ ತೊಳೆದು 4 - 5 ಘಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ನೀರು ಬಗ್ಗಿಸಿ ಮಿಕ್ಸಿ ಜಾರಿಗೆ ಹಾಕಿ. 
  3. ಅದಕ್ಕೆ ತೆಂಗಿನತುರಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ. 
  4. ಜೊತೆಗೆ ಕೊತ್ತಂಬರಿ ಸೊಪ್ಪು, ಶುಂಠಿ ಮತ್ತು ಜೀರಿಗೆ ಸೇರಿಸಿ. 
  5. ಅಗತ್ಯವಿದ್ದಷ್ಟು ನೀರು ಹಾಕಿ ನಯವಾಗಿ ಅರೆಯಿರಿ. ಒಂದು ಪಾತ್ರೆಗೆ ಹಾಕಿ.
  6. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  7. ಹಿಟ್ಟು ತೆಳುವಾದ ಉದ್ದಿನ ದೋಸೆ ಹಿಟ್ಟಿನ ಹದಕ್ಕಿರಲಿ. ಹಿಟ್ಟು ಹುಳಿ ಬರಿಸುವುದು ಬೇಡ. 
  8. ದೋಸೆ ಮಾಡಲು ಹೆಂಚನ್ನು ಬಿಸಿಮಾಡಿ ಕೊಳ್ಳಿ. 
  9. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ. 
  10. ಮುಚ್ಚಳ ಮುಚ್ಚಿ ಬೇಯಿಸಿ.
  11. ಮೇಲಿನಿಂದ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿ ಬಿಸಿ ದೋಸೆಯನ್ನು ಚಟ್ನಿಯೊಂದಿಗೆ ಬಡಿಸಿ. 
Related Posts Plugin for WordPress, Blogger...