Badam milk recipe in Kannada | ಬಾದಾಮ್ ಮಿಲ್ಕ್ ಮಾಡುವ ವಿಧಾನ
ಬಾದಾಮ್ ಮಿಲ್ಕ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- ಸುಮಾರು 20 ಬಾದಾಮಿ
- 2 ಏಲಕ್ಕಿ
- ದೊಡ್ಡ ಚಿಟಿಕೆ ಕೇಸರಿ
- 1 ಕಪ್ ಹಾಲು
- 1/4 ಕಪ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- 1 ಕಪ್ ನೀರು + ಅರೆಯಲು ಬೇಕಾದ ನೀರು
- ಕಾಮಕಸ್ತೂರಿ ಬೀಜ (ಬೇಕಾದಲ್ಲಿ)
ಬಾದಾಮ್ ಮಿಲ್ಕ್ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಬಾದಾಮಿ ಹಾಕಿ ನೆನೆಸಿ. ಕುದಿಯುವ ನೀರಿನಲ್ಲಿ ನೆನೆಸಿದರೆ ಬೇಗ ನೆನೆಯುವುದು.
- ನೆನೆದ ನಂತರ ಸಿಪ್ಪೆ ತೆಗೆಯಿರಿ.
- ಒಂದು ಮಿಕ್ಸಿಜಾರಿನಲ್ಲಿ ಸಿಪ್ಪೆ ತೆಗೆದ ಬಾದಾಮಿ ಹಾಕಿ, ಏಲಕ್ಕಿ ಮತ್ತು ಕೇಸರಿ ಹಾಕಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ.
- ಒಂದು ಪಾತ್ರೆಯಲ್ಲಿ ಹಾಲು ತೆಗೆದುಕೊಳ್ಳಿ.
- ಅರೆದ ಬಾದಾಮಿಯನ್ನು ಸೇರಿಸಿ.
- ನೀರುಮತ್ತು ಸಕ್ಕರೆ ಸೇರಿಸಿ.
- ಆಗಾಗ್ಯೆ ಮಗುಚುತ್ತಾ ಚೆನ್ನಾಗಿ ಒಂದೆರಡು ನಿಮಿಷ ಕುದಿಸಿ.
- ಬಿಸಿ ಆರಿದ ಮೇಲೆ ಕುಡಿಯಿರಿ.
- ಬೇಕಾದಲ್ಲಿ ನೆನೆಸಿದ ಕಾಮಕಸ್ತೂರಿ ಬೀಜವನ್ನು ಸೇರಿಸಬಹುದು. ಮತ್ತು ಬೇಕಾದಲ್ಲಿ ಫ್ರಿಡ್ಜ್ ನಲ್ಲಿಟ್ಟು ತಣ್ಣಗೆ ಮಾಡಿ ಕುಡಿಯಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ