Kalasida avalakki recipe in Kannada | ಕಲಸಿದ ಅವಲಕ್ಕಿ ಮಾಡುವ ವಿಧಾನ
ಕಲಸಿದ ಅವಲಕ್ಕಿ ಒಗ್ಗರಣೆ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 2 ಕಪ್ ಮೀಡಿಯಂ ಅವಲಕ್ಕಿ ಅಥವಾ ತೆಳು ಅವಲಕ್ಕಿ
- 1 ಈರುಳ್ಳಿ
- 1 ಸಣ್ಣ ಟೊಮ್ಯಾಟೋ
- 1/4 ಕಪ್ ತೆಂಗಿನತುರಿ
- ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಟೀಸ್ಪೂನ್ ಸಕ್ಕರೆ
- 3/4 ಟೀಸ್ಪೂನ್ ಉಪ್ಪು ಅಥವಾ ನಿಮ್ಮ ರುಚಿಗೆ ತಕ್ಕಷ್ಟು
- 1 - 2 ಟೀಸ್ಪೂನ್ ನಿಂಬೆಹಣ್ಣಿನ ರಸ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು
- 1 ಟೇಬಲ್ ಚಮಚ ಅಡುಗೆ ಎಣ್ಣೆ
- 2 ಟೇಬಲ್ ಸ್ಪೂನ್ ಕಡ್ಲೆಕಾಯಿ ಅಥವಾ ಶೇಂಗಾ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 2 - 3 ಹಸಿರು ಮೆಣಸಿನಕಾಯಿ
- 4 - 5 ಕರಿ ಬೇವಿನ ಎಲೆ
ಕಲಸಿದ ಅವಲಕ್ಕಿ ಒಗ್ಗರಣೆ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮ್ಯಾಟೋ, ಕೊತ್ತಂಬರಿ ಸೊಪ್ಪು ಮತ್ತು ತೆಂಗಿನ ತುರಿಯನ್ನು ತೆಗೆದುಕೊಳ್ಳಿ.
- ಉಪ್ಪು ಮತ್ತು ಸಕ್ಕರೆ ಸೇರಿಸಿ.
- ಚೆನ್ನಾಗಿ ಹಿಸುಕಿ ಕಲಸಿ.
- ಆಮೇಲೆ ಅದಕ್ಕೆ ಮೀಡಿಯಂ (ಅಥವಾ ತೆಳು) ಅವಲಕ್ಕಿ ಮತ್ತು ನಿಂಬೆರಸ ಸೇರಿಸಿ.
- ಸುಮಾರು ಕಾಲು ಕಪ್ ನಷ್ಟು ನೀರು ಚಿಮುಕಿಸಿ ಕಲಸಿ. ತೆಳು ಅವಲಕ್ಕಿ ಆದಲ್ಲಿ ನೀರು ಹಾಕುವುದು ಬೇಡ.
- ನಂತ್ರ ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ.
- ಆ ಸಮಯದಲ್ಲಿ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಮೊದಲಿಗೆ ಶೇಂಗಾ ಅಥವಾ ಕಡ್ಲೆಕಾಯಿಯನ್ನು ಹುರಿಯಿರಿ.
- ಅದಕ್ಕೆ ಸಾಸಿವೆ ಮತ್ತು ಜೀರಿಗೆ ಹಾಕಿ.
- ಸಾಸಿವೆ ಸಿಡಿದ ಕೂಡಲೇ ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ. ಹುರಿದು ಸ್ಟವ್ ಆಫ್ ಮಾಡಿ.
- ಈ ಒಗ್ಗರಣೆಯನ್ನು ಕಲಸಿಟ್ಟ ಅವಲಕ್ಕಿಗೆ ಹಾಕಿ ಮಗುಚಿ.
- ಬೆಳಗ್ಗಿನ ತಿಂಡಿಗೆ ಅಥವಾ ಸಂಜೆ ಟೀ ಯೊಂದಿಗೆ ಸವಿದು ಆನಂದಿಸಿ.
Super and Simple
ಪ್ರತ್ಯುತ್ತರಅಳಿಸಿ